Asianet Suvarna News Asianet Suvarna News

ಧೋನಿ ಕಡೆಯ ಪಂದ್ಯದಲ್ಲಿ ಚೆಂಡು ಪಡೆದಿದ್ದು ಯಾಕೆ..?

‘ಚೆಂಡು ರಿವರ್ಸ್ ಸ್ವಿಂಗ್ ಆಗುತ್ತಿಲ್ಲವೇಕೆ ಎನ್ನುವುದನ್ನು ಪರಿಶೀಲಿಸಲು ಚೆಂಡನ್ನು ಪಡೆದುಕೊಂಡೆ. ಮುಂದಿನ ವರ್ಷ ಇಂಗ್ಲೆಂಡ್‌ನಲ್ಲಿ ನಾವು ವಿಶ್ವಕಪ್ ಆಡಲಿದ್ದು, ರಿವರ್ಸ್ ಸ್ವಿಂಗ್ ಪ್ರಮುಖ ಪಾತ್ರ ವಹಿಸಲಿದೆ. ಎದುರಾಳಿ ತಂಡಕ್ಕೆ ರಿವರ್ಸ್ ಸ್ವಿಂಗ್ ಸಾಧ್ಯವಾಗುತ್ತಿರುವಾಗ ನಮಗೇಕೆ ಆಗುತ್ತಿಲ್ಲ ಎನ್ನುವ ಗೊಂದಲ ಶುರುವಾಗಿತ್ತು. ಆದರಿಂದ ಬೌಲಿಂಗ್ ಕೋಚ್‌ಗೆ ಬಾಲ್ ನೀಡಿ, ಈ ಕುರಿತು ಚರ್ಚೆ ನಡೆಸಲೆಂದು ಚೆಂಡು ಪಡೆದೆ’ ಎಂದು ಧೋನಿ ಹೇಳಿದ್ದಾರೆ. 

MS Dhoni opens up on why he took the ball after India Vs England match
Author
Mumbai, First Published Aug 8, 2018, 12:21 PM IST

ಮುಂಬೈ[ಆ.08]: ಇಂಗ್ಲೆಂಡ್ ವಿರುದ್ಧ ಕಳೆದ ತಿಂಗಳು ನಡೆದ 3ನೇ ಹಾಗೂ ಅಂತಿಮ ಏಕದಿನ ಪಂದ್ಯದ ಬಳಿಕ ಅಂಪೈರ್‌ರಿಂದ ಚೆಂಡನ್ನು ಪಡೆದ ಧೋನಿ ಭಾರೀ ಚರ್ಚೆಗೆ ದಾರಿ ಮಾಡಿ ಕೊಟ್ಟಿದ್ದರು. ಧೋನಿ ನಿವೃತ್ತಿ ಪಡೆಯಲಿದ್ದಾರೆ ಎಂದು ಸಾಮಾಜಿಕ ತಾಣಗಳಲ್ಲಿ ಸುದ್ದಿ ಹಬ್ಬಿತ್ತು. ಈ ಬಗ್ಗೆ ಸ್ವತಃ ಧೋನಿ ಸ್ಪಷ್ಟನೆ ನೀಡಿದ್ದಾರೆ.

ಇದನ್ನು ಓದಿ: ಎಂ ಎಸ್ ಧೋನಿ ಸದ್ಯಕ್ಕೆ ನಿವೃತ್ತಿಯಾಗಲ್ಲ! ಇದು ಖಚಿತ

‘ಚೆಂಡು ರಿವರ್ಸ್ ಸ್ವಿಂಗ್ ಆಗುತ್ತಿಲ್ಲವೇಕೆ ಎನ್ನುವುದನ್ನು ಪರಿಶೀಲಿಸಲು ಚೆಂಡನ್ನು ಪಡೆದುಕೊಂಡೆ. ಮುಂದಿನ ವರ್ಷ ಇಂಗ್ಲೆಂಡ್‌ನಲ್ಲಿ ನಾವು ವಿಶ್ವಕಪ್ ಆಡಲಿದ್ದು, ರಿವರ್ಸ್ ಸ್ವಿಂಗ್ ಪ್ರಮುಖ ಪಾತ್ರ ವಹಿಸಲಿದೆ. ಎದುರಾಳಿ ತಂಡಕ್ಕೆ ರಿವರ್ಸ್ ಸ್ವಿಂಗ್ ಸಾಧ್ಯವಾಗುತ್ತಿರುವಾಗ ನಮಗೇಕೆ ಆಗುತ್ತಿಲ್ಲ ಎನ್ನುವ ಗೊಂದಲ ಶುರುವಾಗಿತ್ತು. ಆದರಿಂದ ಬೌಲಿಂಗ್ ಕೋಚ್‌ಗೆ ಬಾಲ್ ನೀಡಿ, ಈ ಕುರಿತು ಚರ್ಚೆ ನಡೆಸಲೆಂದು ಚೆಂಡು ಪಡೆದೆ’ ಎಂದು ಧೋನಿ ಹೇಳಿದ್ದಾರೆ. 

ಇದನ್ನು ಓದಿ: ಒನ್’ಡೇ, ಟಿ20 ಕ್ರಿಕೆಟ್’ಗೂ ಧೋನಿ ಗುಡ್’ಬೈ..?

‘50 ಓವರ್‌ಗಳ ಆಟದ ಬಳಿಕ ಐಸಿಸಿಗೆ ಚೆಂಡು ಅನುಪಯುಕ್ತ. ಆದರಿಂದ ಅಂಪೈರ್‌ಗಳನ್ನು ಕೇಳಿ ಚೆಂಡನ್ನು ಪಡೆದೆ. 40 ಓವರ್ ಬಳಿಕ ರಿವರ್ಸ್ ಸ್ವಿಂಗ್ ಮಾಡುವಲ್ಲಿ ಯಶಸ್ವಿಯಾದರೆ, ಬೌಲರ್'ಗಳಿಗೆ ಯಾರ್ಕರ್‌ಗಳನ್ನು ಹಾಕಲು ಸಹ ಸುಲಭವಾಗಲಿದೆ. ಕೊನೆ 10 ಓವರ್‌ಗಳಲ್ಲಿ ಸಾಧ್ಯವಾದಷ್ಟು ರನ್ ನಿಯಂತ್ರಿಸಬೇಕು. ರಿವರ್ಸ್ ಸ್ವಿಂಗ್ ಗೆಲುವಿನ ಮೇಲೆ ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರಲಿದೆ’ ಎಂದು ಧೋನಿ ಹೇಳಿದ್ದಾರೆ.

Follow Us:
Download App:
  • android
  • ios