ಒನ್’ಡೇ, ಟಿ20 ಕ್ರಿಕೆಟ್’ಗೂ ಧೋನಿ ಗುಡ್’ಬೈ..?

MS Dhoni gesture against England gives rise to retirement rumours
Highlights

ಸಾಮಾಜಿಕ ತಾಣಗಳಲ್ಲಿ ಧೋನಿ ಅಂಪೈರ್‌ನಿಂದ ಚೆಂಡನ್ನೇಕೆ ಪಡೆದರು ಎನ್ನುವ ಚರ್ಚೆ ಜೋರಾಗಿ ಸಾಗಿದ್ದು, ಇಂಗ್ಲೆಂಡ್‌ನಿಂದ ವಾಪಸಾದ ಬಳಿಕ ನಿವೃತ್ತಿ ಘೋಷಿಸಲಿದ್ದಾರಾ? ಎನ್ನುವ ಆತಂಕ ಎದುರಾಗಿದೆ. 

ನವದೆಹಲಿ(ಜು.19]: ಇಂಗ್ಲೆಂಡ್ ವಿರುದ್ಧದ 3ನೇ ಪಂದ್ಯದ ಬಳಿಕ ಅಂಪೈರ್‌ನಿಂದ ಚೆಂಡು ಪಡೆದಿರುವ ಭಾರತ ತಂಡದ ಮಾಜಿ ನಾಯಕ ಧೋನಿ ನಿವೃತ್ತಿ ಘೋಷಿಸುವರೆ? ಈ ಪ್ರಶ್ನೆ ಅಭಿಮಾನಿಗಳನ್ನು ಕಾಡಲಾರಂಭಿಸಿದೆ. 

ಸಾಮಾಜಿಕ ತಾಣಗಳಲ್ಲಿ ಧೋನಿ ಅಂಪೈರ್‌ನಿಂದ ಚೆಂಡನ್ನೇಕೆ ಪಡೆದರು ಎನ್ನುವ ಚರ್ಚೆ ಜೋರಾಗಿ ಸಾಗಿದ್ದು, ಇಂಗ್ಲೆಂಡ್‌ನಿಂದ ವಾಪಸಾದ ಬಳಿಕ ನಿವೃತ್ತಿ ಘೋಷಿಸಲಿದ್ದಾರಾ? ಎನ್ನುವ ಆತಂಕ ಎದುರಾಗಿದೆ. 

ಈ ಹಿಂದೆ 2014ರಲ್ಲಿ ಧೋನಿ ಟೆಸ್ಟ್ ನಿವೃತ್ತಿ ಘೋಷಿಸುವ ಮುನ್ನ, ಪಂದ್ಯ ಡ್ರಾ ಆಗಿದ್ದರೂ ಸ್ಟಂಪ್ ಹಿಡಿದು ಮೈದಾನ ತೊರೆದಿದ್ದರು.

loader