ಎಂ ಎಸ್ ಧೋನಿ ಸದ್ಯಕ್ಕೆ ನಿವೃತ್ತಿಯಾಗಲ್ಲ! ಇದು ಖಚಿತ

https://static.asianetnews.com/images/authors/2c1b126a-9adf-5f82-ae4f-e781463685fe.jpg
First Published 27, Jul 2018, 8:49 PM IST
I Can Assure You Dhoni is Not Retiring Right Now
Highlights

ಎಂ ಎಸ್ ಧೋನಿ ನಿವೃತ್ತಿ ಮಾತು ಹಲವು ಬಾರಿ ಸದ್ದು ಮಾಡಿದೆ. ಇತ್ತೀಚೆಗಿನ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಬಳಿಕ  ಧೋನಿ ನಿವೃತ್ತಿ ಹೇಳ್ತಾರೆ ಅನ್ನೋ ಮಾತು ಬಲವಾಗಿ ಕೇಳಿಬಂದಿತ್ತು. ಆದರೆ ಧೋನಿ ಸದ್ಯಕ್ಕೆ ನಿವೃತ್ತಿಯಾಗಲ್ಲ ಅನ್ನೋದು ಬಹಿರಂಗವಾಗಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ.

ಮುಂಬೈ(ಜು.27): ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶನ ನೀಡಿದ ಟೀಂ ಇಂಡಿಯಾ ಮಾಜಿ ನಾಯಕ ಎಂ ಎಸ್ ಧೋನಿ ವಿರುದ್ಧ ಟೀಕೆಗಳು ಕೇಳಿಬಂದಿತ್ತು. ಇಷ್ಟೇ ಅಲ್ಲ ಧೋನಿ ನಿವೃತ್ತಿಗೆ ಸಜ್ಜಾಗಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು.

ಧೋನಿ ಫಾರ್ಮ್ ಕಳೆದುಕೊಂಡಿದ್ದಾರೆ. ಹೀಗಾಗಿ ನಿವೃತ್ತಿ ಸೂಕ್ತ ಅನ್ನೋ ಟೀಕೆ ಕೂಡ ವ್ಯಕ್ತವಾಗಿತ್ತು. ಇದೀಗ ಸದ್ಯ ಎಂ ಎಸ್ ಧೋನಿ ಕ್ರಿಕೆಟ್‌ನಿಂದ ನಿವೃತ್ತಿಯಾಗಲ್ಲ ಅನ್ನೋದನ್ನ ಮಾಜಿ ಆಯ್ಕೆ ಸಮಿತಿ ಮುಖ್ಯಸ್ಥ ಸಂದೀಪ್ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

14 ವರ್ಷದಿಂದ ಧೋನಿ ಜೊತೆ ಆತ್ಮೀಯ ಸಂಬಂಧ ಹೊಂದಿದ್ದೇನೆ. ಧೋನಿ ಅಂತಾರಾಷ್ಟ್ರೀಯ ಕರಿಯರ್ ಆರಂಭಿಸಿದ ದಿನಗಳಿಂದ ಚೆನ್ನಾಗಿ ಬಲ್ಲೆ. ಅಂಡರ್ 19 ಕೋಚ್ ಆಗಿ, ಟೀಂ ಇಂಡಿಯಾ ಆಯ್ಕೆ ಸಮಿತಿಯ ಮುಖ್ಯಸ್ಥನಾಗಿ ಧೋನಿ ಜೊತೆಗೆ ಕಾರ್ಯನಿರ್ವಹಿಸಿದ್ದೇನೆ. ಇಷ್ಟೇ ಅಲ್ಲ ಇದರಾಚೆ ಧೋನಿ ಆತ್ಮೀಯ ಗೆಳೆಯ ಕೂಡ ಹೌದು. ನಾನೀಗ ಮತ್ತೊಮ್ಮೆ ಸ್ಪಷ್ಟಪಡಿಸುತ್ತಿದ್ದೇನೆ. ಧೋನಿ ನಿವೃತ್ತಿ ಸದ್ಯಕ್ಕಿಲ್ಲ ಎಂದು ಸಂದೀಪ್ ಪಾಟೀಲ್ ಹೇಳಿದ್ದಾರೆ.

ವಿಕೆಟ್ ಕೀಪರ್ ಕಮ್ ಬ್ಯಾಟ್ಸ್‌ಮನ್ ವಿಚಾರದಲ್ಲಿ ಟೀಂ ಇಂಡಿಯಾ ಮುಂದಿರೋ ಮೊದಲ ಆಯ್ಕೆ ಎಂ ಎಸ್ ಧೋನಿ. ಧೋನಿಗೆ ಇಂಜುರಿ ಸಮಸ್ಯೆ ತಲೆದೋರಿದರೆ ಮಾತ್ರ ಮುಂದಿನ ಆಯ್ಕೆ ಕುರಿತು ಚರ್ಚೆ ನಡೆಯಲಿದೆ. 2012ರಿಂದ 2016ರ ವರೆಗೆ ನಾವು ಧೋನಿ ಬ್ಯಾಕ್‌ಅಪ್ ವಿಕೆಟ್ ಕೀಪರ್‌ಗಾಗಿ ಸಾಕಷ್ಟು ಹುಡುಕಾಟ ನಡೆಸಿದ್ದೇವೆ. ಆದರೆ ಸೂಕ್ತ ವಿಕೆಟ್ ಕೀಪರ್ ಸಿಗಲಿಲ್ಲ.

ಮಾಧ್ಯಮಗಳ ನಿವೃತ್ತಿ ಸುದ್ಧಿಯಲ್ಲಿ ಯಾವುದೇ ಹುರುಳಿಲ್ಲ. ಹೀಗಾಗಿ ಅಭಿಮಾನಿಗಳು ಆತಂಕ ಪಡೋ ಅವಶ್ಯಕತೆ ಇಲ್ಲ ಎಂದು ಸಂದೀಪ್ ಪಾಟೀಲ್ ಹೇಳಿದ್ದಾರೆ. ಮುಂದಿನ ವಿಶ್ವಕಪ್ ಟೂರ್ನಿಯಲ್ಲಿ ಧೋನಿ ಉಪಸ್ಥಿತಿ ಟೀಂ ಇಂಡಿಯಾಗೆ ಮುಖ್ಯ ಎಂದು ಪಾಟೀಲ್ ಹೇಳಿದ್ದಾರೆ.
 

loader