ಸದ್ಯ ಮಾಹಿ ರಾಂಚಿಯ ವರ್ತುಲ ರಸ್ತೆಯಲ್ಲಿರುವ ಏಳು ಎಕರೆ ಜಾಗದಲ್ಲಿ, ಹೊಸ ತೋಟದ ಮನೆ ನಿರ್ಮಿಸುತ್ತಿದ್ದಾರೆ.
ರಾಂಚಿ(ಮಾ.17): ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸದಾ ಒಂದಲ್ಲ ಒಂದು ವಿಷಯದಿಂದ ಸುದ್ದಿಯಲ್ಲಿ ಇರುತ್ತಾರೆ.
ಭಾರತ ಭೂಪಟದಲ್ಲಿ ರಾಂಚಿಗೆ ವಿಶೇಷ ಸ್ಥಾನ ಕಲ್ಪಿಸಿಕೊಟ್ಟ ಧೋನಿ, ಇದೀಗ ತಮ್ಮ ತವರಲ್ಲಿ ಮತ್ತೊಂದು ಭವ್ಯ ಬಂಗಲೆ ನಿರ್ಮಿಸಲು ಕೈಹಾಕಿದ್ದಾರೆ.
‘ಎಂಇಸಿಓಎನ್’ ಸಂಸ್ಥೆಯಲ್ಲಿ ಪಂಪ್ ನಿರ್ವಾಹಕರಾಗಿದ್ದ ಅವರ ತಂದೆಗೆ ನೀಡಲಾಗಿದ್ದ ಸಣ್ಣ ಮನೆಯಲ್ಲೇ ಬಾಲ್ಯ ಕಳೆದ ಧೋನಿ, ಭಾರತ ತಂಡದ ನಾಯಕನಾದ ಬಳಿಕ ಇಲ್ಲಿನ ಹರ್ಮು ಪ್ರದೇಶದಲ್ಲಿ ಅತ್ಯಾಧುನಿಕ ವಿನ್ಯಾಸದ ಬಂಗಲೆಯನ್ನು ನಿರ್ಮಿಸಿದ್ದರು. ಸದ್ಯ ರಾಂಚಿಯ ವರ್ತುಲ ರಸ್ತೆಯಲ್ಲಿರುವ ಏಳು ಎಕರೆ ಜಾಗದಲ್ಲಿ, ಹೊಸ ತೋಟದ ಮನೆ ನಿರ್ಮಿಸುತ್ತಿದ್ದಾರೆ.
ಈ ಭವ್ಯ ಬಂಗಲೆಯಲ್ಲಿ ಒಳಾಂಗಣ ಕ್ರೀಡಾಂಗಣವಿರಲಿದೆ ಅನ್ನುವ ಸುದ್ದಿ ಎಲ್ಲರ ಹುಬ್ಬೇರಿಸಿದೆ. ಮನೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಒಂದೂವರೆ ವರ್ಷದಲ್ಲಿ ಮುಕ್ತಾಯಗೊಳ್ಳಲಿದೆ ಎಂದು ಹೇಳಲಾಗಿದೆ.
