ಸೇನೆಯಲ್ಲಿ ಸೇವೆ ಸಲ್ಲಿಸಿ ರಾಂಚಿಗೆ ಮರಳಿದ ಸೈನಿಕ ಧೋನಿ!

ಭಾರತೀಯ ಸೇನೆ ಸೇರಿಕೊಂಡಿದ್ದ ಕ್ರಿಕೆಟಿಗ ಎಂ.ಎಸ್.ಧೋನಿ ಸೇವೆ ಪೂರ್ಣಗೊಳಿಸಿ ತಾಯ್ನಾಡಿಗೆ ವಾಪ್ಸಾಸಾಗಿದ್ದಾರೆ.  ಜಮ್ಮು ಮತ್ತು ಕಾಶ್ಮೀರದ ಅಪಾಯಕಾರಿ ಗಡಿ ಪ್ರದೇಶದಲ್ಲಿ ಧೋನಿ ಸಾಹಸ ಮೆರೆದಿದ್ದಾರೆ. ರಾಂಚಿಗೆ ಮರಳಿದ ಧೋನಿಗೆ ಅದ್ಧೂರಿ ಸ್ವಾಗತ ಕೋರಿದ್ದಾರೆ.

Cricketer MS Dhoni complete Army service and spotted at Leh airport

ಲೇಹ್(ಆ.17): ಭಾರತೀಯ ಸೇನೆಯಲ್ಲಿ 15 ದಿನಗಳ ಕಾಲ ಯಶಸ್ವಿಯಾಗಿ ಸೇವೆ ಸಲ್ಲಿಸಿದ ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ಇದೀಗ ರಾಂಚಿಗೆ ಮರಳಿದ್ದಾರೆ.  ಟೆರಿಟೊರಿಯಲ್ ಆರ್ಮಿ 106 ಬೆಟಾಲಿಯನ್ ಫೋರ್ಸ್‌ನಲ್ಲಿ ಸೈನಿಕರ ಜೊತೆ ಧೋನಿ ಜಮ್ಮು ಕಾಶ್ಮೀರದ ಕಣಿವೆ ರಾಜ್ಯದಲ್ಲಿ ಸೇವೆ ಸಲ್ಲಿಸಿದ್ದರು. ಸೇವೆ ಮುಗಿಸಿ ತವರಿಗೆ ವಾಪಾಸ್ಸಾಗುವು ವೇಳೆ ಧೋನಿ, ಲೇಹ್ ವಿಮಾನ ನಿಲ್ದಾಣದಲ್ಲಿ ಕ್ಯಾಮರ ಕಣ್ಣಿಗೆ ಕಾಣಿಸಿಕೊಂಡರು.

ಇದನ್ನೂ ಓದಿ: ಸೇನೆಯಲ್ಲಿ ಧೋನಿ ಆಟೋಗ್ರಾಫ್‌ಗೆ ಫುಲ್ ಡಿಮ್ಯಾಂಡ್!

 ಜುಲೈ 31 ರಿಂದ ಆಗಸ್ಟ್ 15ರ ವರೆಗೆ ಧೋನಿ ಕಾಶ್ಮೀರದಲ್ಲಿ ಭಾರತೀಯ ಸೈನಿಕರ ಜೊತೆ ಸೇವೆ ಸಲ್ಲಿಸಿದರು. ಸೇವೆಯ ಅಂತಿಮ ದಿನ ಲಡಾಕ್‌ನಲ್ಲಿದ್ದ ಧೋನಿ ಬಳಿಕ, ಲೇಹ್ ವಿಮಾನ ನಿಲ್ದಾಣದ ಮೂಲಕ ರಾಂಚಿಗೆ ಆಗಮಿಸಿದ್ದಾರೆ. ಸೇನೆ ಸೇರಿಕೊಳ್ಳಲು, ವೆಸ್ಟ್ ಇಂಡೀಸ್ ವಿರುದ್ದದ ಸರಣಿಯಿಂದಲೂ ಹಿಂದೆ ಸರಿದಿದ್ದರು.  ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಲಡಾಕ್ ಬೇಟಿ ಮಾಡಿದ ಧೋನಿ, ಮಿಲಿಟರಿ ಆಸ್ಪತ್ರೆಗೆ ಬೇಟಿ ನೀಡಿದ್ದರು. 

ಇದನ್ನೂ ಓದಿ: ಸೈನಿಕರ ಜತೆ ಧೋನಿ ವಾಲಿಬಾಲ್‌!

ಭಾರತೀಯ ಸೇನೆಯಿಂದ ಲೆಫ್ಟಿನೆಂಟ್ ಕರ್ನಲ್ ಗೌರವ್ ಹುದ್ದೆ ಹೊಂದಿರುವ ಧೋನಿ, ಸೇನೆ ಬಗ್ಗೆ ವಿಶೇಷ ಗೌರವ ಇಟ್ಟುಕೊಂಡಿದ್ದಾರೆ. ಧೋನಿ ದೇಶ ಸೇವೆಗೆ ಎಲ್ಲೆಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿತ್ತು. 
 

Latest Videos
Follow Us:
Download App:
  • android
  • ios