Asianet Suvarna News Asianet Suvarna News

ಐಪಿಎಲ್'ನಲ್ಲಿ ಮತ್ತೊಂದು ದಾಖಲೆ ಬರೆದ ಧೋನಿ

ಅತಿಹೆಚ್ಚು ಬಾರಿ ಫೈನಲ್‌ನಲ್ಲಿ ಕಾಣಿಸಿಕೊಳ್ಳಲಿರುವ ಆಟಗಾರ ಅನ್ನುವ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

MS Dhoni in record seventh IPL final as Rising Pune Supergiant hammer Mumbai Indians
  • Facebook
  • Twitter
  • Whatsapp

ಮುಂಬೈ(ಮೇ.17): ಸ್ಫೋಟಕ ಬ್ಯಾಟಿಂಗ್‌ ನಡೆಸಿ ಪುಣೆ ತಂಡವನ್ನು ಫೈನಲ್‌ ತಲುಪುವಂತೆ ಮಾಡಿದ ಎಂ.ಎಸ್‌.ಧೋನಿ ಐಪಿಎಲ್‌'ನಲ್ಲಿ ಮತ್ತೊಂದು ದಾಖಲೆ ಬರೆದಿದ್ದಾರೆ.

ಧೋನಿ ಆಡಲಿರುವ ಏಳನೇ ಐಪಿಎಲ್‌ ಫೈನಲ್‌ ಇದಾಗಲಿದೆ. ಅತಿಹೆಚ್ಚು ಬಾರಿ ಫೈನಲ್‌ನಲ್ಲಿ ಕಾಣಿಸಿಕೊಳ್ಳಲಿರುವ ಆಟಗಾರ ಅನ್ನುವ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

ಈ ಮೊದಲು 2008, 2010, 2011, 2012, 2013, 2015 ಧೋನಿ ಚೆನ್ನೈ ಸೂಪರ್‌ಕಿಂಗ್ಸ್‌ ಪರ ಫೈನಲ್‌ ಆಡಿದ್ದರು.

ಇದರ ಜೊತೆಗೆ 2010 ಹಾಗೂ 2011ರಲ್ಲಿ ಚೆನ್ನೈ ಸೂಪರ್'ಕಿಂಗ್ಸ್ ತಂಡವನ್ನು ತಂಡವನ್ನು ಧೋನಿ ಚಾಂಪಿಯನ್‌ ಪಟ್ಟಕ್ಕೇರಿಸಿದ್ದರು.

ಐಪಿಎಲ್ ಫೈನಲ್'ನಲ್ಲಿ ಮಾಹಿ ಪಯಣವಿದು:

2008- CSK- (ರಾಜಸ್ತಾನ ರಾಯಲ್ಸ್ ವಿರುದ್ಧ ಸೋಲು)

2010- CSK -(ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವು)

2011- CSK- (ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗೆಲುವು)

2012- CSK- (ಕೋಲ್ಕತ ನೈಟ್ ರೈಡರ್ಸ್ ವಿರುದ್ಧ ಸೋಲು)

2013- CSK- (ಮುಂಬೈ ಇಂಡಿಯನ್ಸ್ ವಿರುದ್ಧ ಸೋಲು)

2015- CSK- (ಮುಂಬೈ ಇಂಡಿಯನ್ಸ್ ವಿರುದ್ಧ ಸೋಲು)

2017- ರೈಸಿಂಗ್ ಪುಣೆ ಸೂಪರ್'ಜೈಂಟ್.....?

Follow Us:
Download App:
  • android
  • ios