ತಮ್ಮ 80 ಪಂದ್ಯಗಳ ಅಂತಾರಾಷ್ಟ್ರೀಯ ಟಿ20 ವೃತ್ತಿಬದುಕಿನಲ್ಲಿ ಸ್ಟಂಪ್ ಆಗಿದ್ದು ಇದೇ ಮೊದಲು.

ಗುವಾಹಟಿ(ಅ.11): ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ಮಂಗಳವಾರ ಆಸ್ಟ್ರೇಲಿಯಾ ವಿರುದ್ಧ 2ನೇ ಟಿ20ಯಲ್ಲಿ ಆ್ಯಡಂ ಜಂಪಾ ಬೌಲಿಂಗ್‌ನಲ್ಲಿ ಸ್ಟಂಪ್‌ಔಟ್ ಆದರು.

ತಮ್ಮ ಚುರುಕಾದ ವಿಕೆಟ್ ಕೀಪಿಂಗ್‌ನಿಂದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳನ್ನೂ ಸ್ಟಂಪ್ ಮಾಡಿ ಗಮನ ಸೆಳೆದಿರುವ ಧೋನಿ, ತಮ್ಮ 80 ಪಂದ್ಯಗಳ ಅಂತಾರಾಷ್ಟ್ರೀಯ ಟಿ20 ವೃತ್ತಿಬದುಕಿನಲ್ಲಿ ಸ್ಟಂಪ್ ಆಗಿದ್ದು ಇದೇ ಮೊದಲು. ಅಲ್ಲದೇ 306 ಏಕದಿನ ಪಂದ್ಯಗಳನ್ನು ಆಡಿರುವ ಧೋನಿ ಕೇವಲ ಒಮ್ಮೆ ಸ್ಟಂಪ್ ಆಗಿದ್ದಾರೆ. ಇನ್ನು 90 ಟೆಸ್ಟ್‌ಗಳಲ್ಲಿ 3 ಬಾರಿ ಮಾತ್ರ ಸ್ಟಂಪ್ ಔಟ್ ಆಗಿದ್ದಾರೆ.