ಪಾಕಿಸ್ತಾನದಲ್ಲಿ ಸೆರೆಯಾಗಿದ್ದ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ಭಾರತಕ್ಕೆ ಆಗಮಿಸಿದ್ದಾರೆ. ಇಡಿ ದೇಶ ವಿಂಗ್ ಕಮಾಂಡರ್ ಆಗಮನದಿಂದ ಸಂತಸದಲ್ಲಿ ಕುಣಿದು ಕುಪ್ಪಳಿಸಿದೆ. ಇದೀಗ ಬಿಸಿಸಿಐ ಅಭಿನಂದನ್‌ಗೆ ಜರ್ಸಿ ಬಿಡುಗಡೆ ಮಾಡೋ ಮೂಲಕ ಗೌರವ ಸೂಚಿಸಿದೆ.
ಹೈದರಾಬಾದ್(ಮಾ.02): ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೂ ಮೊದಲು ಟೀಂ ಇಂಡಿಯಾ ಹೊಸ ಜರ್ಸಿ ಬಿಡುಗಡೆ ಮಾಡಿದೆ. 2019ರ ವಿಶ್ವಕಪ್ ಟೂರ್ನಿಗಾಗಿ ಭಾರತ ಹೊಸ ಜರ್ಸಿ ಬಿಡುಗಡೆ ಮಾಡಿದೆ. ವಿಂಗ್ ಕಮಾಂಡರ್ ಅಭಿನಂದನ್ ಭಾರತಕ್ಕೆ ಆಗಮಿಸಿದ ಹಿನ್ನಲೆಯಲ್ಲಿ ಹೊಸ ಜರ್ಸಿ ಬಿಡುಗಡೆ ಮಾಡಿದೆ.
ಇದನ್ನೂ ಓದಿ: ವಿಶ್ವಕಪ್ ಟೂರ್ನಿಗಾಗಿ ಟೀಂ ಇಂಡಿಯಾ ಹೊಸ ಜರ್ಸಿ ಅನಾವರಣ!
ಪಾಕಿಸ್ತಾನ ಯುದ್ಧವಿಮಾಗಳನ್ನ ಹಿಮ್ಮೆಟ್ಟಿಸುವ ವೇಳೆ ಪಾಕಿಸ್ತಾನದಲ್ಲಿ ಸೆರೆಯಾದ ವಿಂಗ್ ಕಮಾಂಡರ್ ಅಭಿನಂದನ್ ಮಾ.01 ರಂದು ತಾಯ್ನಾಡಿಗೆ ಆಗಮಿಸಿದ್ದಾರೆ. ವಾಘಾ ಗಡಿ ಮೂಲಕ ಭಾರತಕ್ಕೆ ಆಗಮಿಸಿದ ವೀರ ಯೋಧನನ್ನ ಅದ್ಧೂರಿಯಾಗಿ ಸ್ವಾಗತಿಸಲಾಗಿದೆ. ಇದೀಗ ಅಭಿನಂದನ್‌ಗೆ ಸ್ವಾಗತ ಕೋರುವ ನಿಟ್ಟಿನಲ್ಲಿ ಬಿಸಿಸಿಐ ವಿಂಗ್ ಕಮಾಂಡರ್ ಅಭಿನಂದನ್ ಹೆಸರಿನಲ್ಲಿ ಜರ್ಸಿ ಬಿಡುಗಡೆ ಮಾಡಿದೆ.
ಇದನ್ನೂ ಓದಿ: ರೋಹಿತ್ ಶರ್ಮಾ ಟ್ರೋಲ್ ಮಾಡಿದ ಮುಂಬೈ ಇಂಡಿಯನ್ಸ್!
ವಿಂಗ್ ಕಮಾಂಡರ್ ಅಭಿನಂದನ್ ಜರ್ಸಿಗೆ 1 ನಂಬರ್ ನೀಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಜರ್ಸಿ ಬಿಡುಗಡೆ ಮಾಡಿದೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್ ಸೇರಿದಂತೆ ಟೀಂ ಇಂಡಿಯಾ ಕ್ರಿಕೆಟಿಗರು ಟ್ವಿಟರ್ ಮೂಲಕ ಅಭಿನಂದನ್ ಜರ್ಸಿ ಪೋಸ್ಟ್ ಮಾಡಿದ್ದಾರೆ.
