Asianet Suvarna News Asianet Suvarna News

ಧೋನಿ ಬೆಂಬಲಿಸಿದ ಶೇನ್ ವಾರ್ನ್

ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಟಿ20 ಕ್ರಿಕಟ್'ನಲ್ಲಿ ಧೋನಿ ಸಾಮರ್ಥ್ಯದ ಬಗ್ಗೆ ಪ್ರಶ್ನೆ ಮಾಡಿದ್ದರು.

MS Dhoni Does Not Need To Prove Anything To Anyone
  • Facebook
  • Twitter
  • Whatsapp

ನವದೆಹಲಿ(ಏ.18): ಬ್ಯಾಟಿಂಗ್ ವೈಫಲ್ಯದಿಂದಾಗಿ ತೀವ್ರ ಟೀಕೆಗೆ ಗುರಿಯಾಗಿರುವ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್. ಧೋನಿಯನ್ನು ಆಸ್ಟ್ರೇಲಿಯಾದ ಮಾಜಿ ಆಟಗಾರ ಶೇನ್ ವಾರ್ನ್ ಬೆಂಬಲಿಸಿದ್ದಾರೆ.

‘‘ಧೋನಿ ಯಾರಿಗೂ ಏನನ್ನೂ ಸಾಬೀತು ಪಡಿಸಬೇಕಾದ ಅಗತ್ಯವಿಲ್ಲ’’ ಎಂದು ಅವರು ಹೇಳಿದ್ದಾರೆ.

‘‘ಧೋನಿ ಎಲ್ಲಾ ಮಾದರಿಯಲ್ಲೂ ವಿಶ್ವ ಶ್ರೇಷ್ಠ ಆಟಗಾರ. ಅವರೊಬ್ಬ ಶ್ರೇಷ್ಠ ನಾಯಕ ಕೂಡ ಹೌದು. ಅನೇಕರಿಗೆ ಅವರು ಸ್ಫೂರ್ತಿಯಾಗಿದ್ದಾರೆ’’ ಎಂದು ವಾರ್ನ್ ಟ್ವೀಟ್ ಮಾಡಿದ್ದಾರೆ.

ಈ ಆವೃತ್ತಿಯ ಐಪಿಎಲ್ ಆರಂಭಕ್ಕೂ ಮುನ್ನವೇ ಪುಣೆ ಸೂಪರ್‌'ಜೈಂಟ್ ತಂಡದ ನಾಯಕತ್ವ ಕಳೆದುಕೊಂಡ ಧೋನಿ, ಪಂದ್ಯವಳಿಯಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ. 5 ಪಂದ್ಯಗಳಿಂದ ಕೇವಲ 61 ರನ್ ಗಳಿಸಿದ್ದಾರೆ.

ಮೊದಲು ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಟಿ20 ಕ್ರಿಕಟ್'ನಲ್ಲಿ ಧೋನಿ ಸಾಮರ್ಥ್ಯದ ಬಗ್ಗೆ ಪ್ರಶ್ನೆ ಮಾಡಿದ್ದರು.

Follow Us:
Download App:
  • android
  • ios