ರಾಂಚಿ(ಅ.16): ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ  ಎಂ.ಎಸ್ ಧೋನಿ ವಯಸ್ಸು 37 ಆದರೂ ಈಗಲೂ ಅಷ್ಟೇ ಫಿಟ್. ರನ್ನಿಂಗ್‌ನಲ್ಲಿ ಯುವಕರನ್ನೇ ನಾಚಿಸುತ್ತಾರೆ ಮಾಜಿ ನಾಯಕ. ಧೋನಿ ಎಷ್ಟು ಫಿಟ್ ಆಗಿದ್ದಾರೋ, ಪುತ್ರಿ ಝಿವಾ ಧೋನಿ ಕೂಡ ಅಷ್ಟೇ ಫಿಟ್ ಆಗಿದ್ದಾರೆ.

ಎಂ.ಎಸ್ ಧೋನಿ ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಆದರೆ ಧೋನಿಯ ಅಭ್ಯಾಸ, ಫಿಟ್ನೆಸ್ ಕಸರತ್ತು ಪ್ರತಿ ದಿನ ಮುಂದುವರಿಯುತ್ತೆ. ಧೋನಿ ರೀತಿಯಲ್ಲೇ ಮಗಳು ಝಿವಾ ಕೂಡ ಫಿಟ್ನೆಸ್ ಕಸರತ್ತು ಆರಂಭಿಸಿದ್ದಾರೆ.

 

 
 
 
 
 
 
 
 
 
 
 
 
 

#firsttimeplank #mommyspartnerincrime

A post shared by ZIVA SINGH DHONI (@zivasinghdhoni006) on Oct 15, 2018 at 4:17am PDT

;

 

ಮನೆಯಲ್ಲಿ ವ್ಯಾಯಾಮ ಕಸರತ್ತು ಮಾಡುತ್ತಿರುವ ಝಿವಾ ಧೋನಿ ವೀಡಿಯೋ ಇದೀಗ ವೈರಲ್ ಆಗಿದೆ.  ಮನೆಯಲ್ಲಿ ಝಿವಾ ಕಸರತ್ತು ಮಾಡೋ ಮೂಲಕ ಅಪ್ಪನ ರೀತಿಯಲ್ಲಿ ಫಿಟ್ ಆಗಿಲು ಪ್ರಯತ್ನ ಮಾಡಿದ್ದಾರೆ.

ಏಷ್ಯಾಕಪ್ ಟೂರ್ನಿ ಬಳಿಕ ವಿಶ್ರಾಂತಿ ಜಾರಿರುವ ಎಂ.ಎಸ್.ಧೋನಿ ಇದೀಗ ವೆಸ್ಟ್ಇಂಡೀಸ್ ವಿರುದ್ದದ ಏಕದಿನ ಹಾಗೂ ಟಿ20 ಸರಣಿ ಆಡಲಿದ್ದಾರೆ.