ಧೋನಿಯ ಈ ಔದಾರ್ಯತೆಗೆ ಕರಗಿಹೋದ ಥಾಮಸ್, ಇನ್ನು ಮುಂದೆ ತನ್ನ ಅಂಗಡಿಗೆ ‘ಧೋನಿ ಟೀ ಸ್ಟಾಲ್’ ಎಂದು ನಾಮಕರಣ ಮಾಡುವುದಾಗಿ ನಿರ್ಧರಿಸಿದ್ದಾರಂತೆ.

ಕೋಲ್ಕತಾ(ಮಾ.02): ಟೀಂ ಇಂಡಿಯಾ ಜೆರ್ಸಿ ತೊಡುವ ಮುನ್ನ ಖರಗ್‌'ಪುರದ ರೇಲ್ವೆ ಸ್ಟೇಷನ್‌ನಲ್ಲಿ ಟಿಟಿಯಾಗಿ ಕಾರ್ಯನಿರ್ವಹಿಸುತ್ತಿದ್ದ ರಾಂಚಿ ಕ್ರಿಕೆಟಿಗ ಎಂ.ಎಸ್. ಧೋನಿ, ಸದ್ಯ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಜಾರ್ಖಂಡ್ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಇದೇ ಟೂರ್ನಿಗಾಗಿ 13 ವರ್ಷಗಳ ಬಳಿಕ ರೈಲಿನಲ್ಲಿ ಪ್ರಯಾಣಿಸಿ ಸುದ್ದಿಯಾದ ಧೋನಿ, ಪ್ರಯಾಣದ ವೇಳೆ ಖರಗ್‌'ಪುರ ಸ್ಟೇಷನ್‌'ನ ಚಾಯ್ ವಾಲಾ ಥಾಮಸ್ ಅವರನ್ನು ಗುರುತಿಸಿದ್ದಾರೆ. ತಾನು ಟಿಟಿಯಾಗಿದ್ದಾಗ ಇದೇ ಥಾಮಸ್ ಅಂಗಡಿಯಲ್ಲಿ ಚಹಾ ಸೇವಿಸುತ್ತಿದ್ದ ಧೋನಿ, ಅದನ್ನು ನೆನೆದು ತನ್ನ ಹಳೆಯ ಸ್ನೇಹಿತರಿಗಾಗಿ ಹೋಟೆಲ್ ಒಂದರಲ್ಲಿ ಹಮ್ಮಿಕೊಂಡಿದ್ದ ಔತಣಕೂಟಕ್ಕೆ ಅವರನ್ನೂ ಆಹ್ವಾನಿಸಿ ಹಿರಿತನ ಮೆರೆದರು.

ಧೋನಿಯ ಈ ಔದಾರ್ಯತೆಗೆ ಕರಗಿಹೋದ ಥಾಮಸ್, ಇನ್ನು ಮುಂದೆ ತನ್ನ ಅಂಗಡಿಗೆ ‘ಧೋನಿ ಟೀ ಸ್ಟಾಲ್’ ಎಂದು ನಾಮಕರಣ ಮಾಡುವುದಾಗಿ ನಿರ್ಧರಿಸಿದ್ದಾರಂತೆ.