ಮುನ್ನೂರು ಏಕದಿನ ಪಂದ್ಯಗಳ ಗಡಿ ದಾಟಿದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಈಗ ಹೊಸ ವಿಶ್ವದಾಖಲೆ ಸ್ಥಾಪಿಸಿದ್ದಾರೆ. ಏಕದಿನ ಕ್ರಿಕೆಟ್'ನಲ್ಲಿ ಅತೀ ಹೆಚ್ಚು ಸ್ಟಂಪಿಂಗ್ ಮಾಡಿದ ದಾಖಲೆ ಸ್ಥಾಪಿಸಿದ್ದಾರೆ. ತಮ್ಮ 301ನೇ ಪಂದ್ಯದಲ್ಲಿ ಧೋನಿ 100 ಸ್ಟಂಪಿಂಗ್'ನ ಮೈಲಿಗಲ್ಲನ್ನೂ ಮುಟ್ಟಿದ್ದಾರೆ. ಶ್ರೀಲಂಕಾ ವಿರುದ್ಧದ ಐದನೇ ಏಕದಿನ ಪಂದ್ಯದಲ್ಲಿ ಧೋನಿಯ ದಾಖಲೆ ಬಂದಿದೆ. ಯುಜವೇಂದ್ರ ಚಾಹಲ್ ಬೌಲಿಂಗ್'ನಲ್ಲಿ ಧನಂಜಯ ಅವರನ್ನು ಧೋನಿ ಬಹಳ ಕೂಲ್ ಆಗಿ ಸ್ಟಂಪ್ ಔಟ್ ಮಾಡಿದರು.

ಕೊಲಂಬೋ(ಸೆ. 03): ಮುನ್ನೂರು ಏಕದಿನ ಪಂದ್ಯಗಳ ಗಡಿ ದಾಟಿದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಈಗ ಹೊಸ ವಿಶ್ವದಾಖಲೆ ಸ್ಥಾಪಿಸಿದ್ದಾರೆ. ಏಕದಿನ ಕ್ರಿಕೆಟ್'ನಲ್ಲಿ ಅತೀ ಹೆಚ್ಚು ಸ್ಟಂಪಿಂಗ್ ಮಾಡಿದ ದಾಖಲೆ ಸ್ಥಾಪಿಸಿದ್ದಾರೆ. ತಮ್ಮ 301ನೇ ಪಂದ್ಯದಲ್ಲಿ ಧೋನಿ 100 ಸ್ಟಂಪಿಂಗ್'ನ ಮೈಲಿಗಲ್ಲನ್ನೂ ಮುಟ್ಟಿದ್ದಾರೆ. ಶ್ರೀಲಂಕಾ ವಿರುದ್ಧದ ಐದನೇ ಏಕದಿನ ಪಂದ್ಯದಲ್ಲಿ ಧೋನಿಯ ದಾಖಲೆ ಬಂದಿದೆ. ಯುಜವೇಂದ್ರ ಚಾಹಲ್ ಬೌಲಿಂಗ್'ನಲ್ಲಿ ಧನಂಜಯ ಅವರನ್ನು ಧೋನಿ ಬಹಳ ಕೂಲ್ ಆಗಿ ಸ್ಟಂಪ್ ಔಟ್ ಮಾಡಿದರು.

ಏಕದಿನ ಕ್ರಿಕೆಟ್'ನಲ್ಲಿ ಅತೀ ಹೆಚ್ಚು ಸ್ಟಂಪಿಂಗ್ ಮಾಡಿದವರು:
1) ಎಂಎಸ್ ಧೋನಿ: 100
2) ಕುಮಾರ ಸಂಗಕ್ಕಾರ(ಶ್ರೀಲಂಕಾ): 99
3) ಕಲುವಿತರಣ(ಶ್ರೀಲಂಕಾ): 75
4) ಮೊಯಿನ್ ಖಾನ್(ಪಾಕ್): 73
5) ಆ್ಯಡಂ ಗಿಲ್'ಕ್ರಿಸ್ಟ್(ಆಸ್ಟ್ರೇಲಿಯಾ): 55
6) ನಯನ್ ಮೊಂಗಿಯಾ(ಭಾರತ): 44
7) ಮುಷ್ಫಿಕುರ್ ರಹೀಂ(ಬಾಂಗ್ಲಾ): 40
8) ಇಯಾನ್ ಹೀಲಿ(ಆಸ್ಟ್ರೇಲಿಯಾ): 39
9) ರಷೀದ್ ಲತೀಫ್(ಪಾಕ್): 38
10) ಖಾಲಿದ್ ಮಷೂದ್(ಬಾಂಗ್ಲಾ): 35