ಚೆನ್ನೈ(ಏ.26): 12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂ.ಎಸ್.ಧೋನಿ 2ನೇ ಬಾರಿಗೆ ತಂಡದಿಂದ ಹೊರುಗುಳಿದಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಿಂದ ಎಂ.ಎಸ್.ಧೋನಿ ಹಾಗೂ ರವೀಂದ್ರ ಜಡೇಜಾಗೆ ವಿಶ್ರಾಂತಿ ನೀಡಲಾಗಿತ್ತು. ಹೀಗಾಗಿ ಸುರೇಶ್ ರೈನಾ ತಂಡದ ನಾಯಕತ್ವ ವಹಿಸಿಕೊಂಡರೆ, ಅಂಬಾಟಿ ರಾಯುಡು ಕೀಪಿಂಗ್ ಜವಾಬ್ದಾರಿ ವಹಿಸಿಕೊಂಡರು.

ಇದನ್ನೂ ಓದಿ: ಗೆಲುವಿಗೆ ಮರಳಿದ RCBಗೆ ನಿಜಕ್ಕೂ ನೋವಾಗಿದ್ದು ಎಲ್ಲಿ? ಕೊಹ್ಲಿ ಹೇಳಿದ್ರು ಸತ್ಯ!

ಮುಂಬೈ ವಿರುದ್ಧದ ಮಹತ್ವದ ಪಂದ್ಯಕ್ಕೆ ಧೋನಿ ಹಾಗೂ ರವೀಂದ್ರ ಜಡೇಜಾಗೆ ವಿಶ್ರಾಂತಿ ನೀಡಲು ಕಾರಣವಿದೆ. ಅನಾರೋಗ್ಯದ ಕಾರಣ ಧೋನಿ ಹಾಗೂ ಜಡೇಜಾಗೆ ವಿಶ್ರಾಂತಿ ನೀಡಲಾಗಿದೆ. ಟಾಸ್ ವೇಳೆ ಸುರೇಶ್ ರೈನಾ ಈ ಮಾಹಿತಿ ಖಚಿತಪಡಿಸಿದ್ದರು.

ಇದನ್ನೂ ಓದಿ: ಪಂಜಾಬ್ ವಿರುದ್ಧ ಅಪರೂಪದ ದಾಖಲೆ ಬರೆದ RCB..!

ಈ ಆವೃತ್ತಿಯಲ್ಲಿ ಸನ್ ರೈಸರ್ಸ್ ವಿರುದ್ಧದ ಪಂದ್ಯದಲ್ಲೂ ಧೋನಿ ತಂಡದಿಂದ ಹೊರಗುಳಿದಿದ್ದರು. ಈ ಎರಡು ಪಂದ್ಯ ಹೊರತು ಪಡಿಸಿದರೆ, 2010ರಲ್ಲಿ ಧೋನಿ ಐಪಿಎಲ್ ಪಂದ್ಯದಿಂದ ಹೊರಗುಲಿದಿದ್ದರು. ಇದಾದ ಬಳಿಕ ಇದೀಗ 2019ರ ಐಪಿಎಲ್ ಟೂರ್ನಿಯಲ್ಲಿ 2 ಬಾರಿ ಹೊರಗುಳಿದಿದ್ದಾರೆ.