Asianet Suvarna News Asianet Suvarna News

ಕ್ರಿಕೆಟ್ ವಿಶ್ವಕಪ್: ಭಾರತ ಪಂದ್ಯಗಳ ಟಿಕೆಟ್ ಸೋಲ್ಡ್’ಔಟ್

ಇಂಗ್ಲೆಂಡ್’ನಲ್ಲಿ ಮೇ 30ರಿಂದ ಜುಲೈ 14ರವರೆಗೆ ನಡೆಯಲಿರುವ 2019ರ ಏಕದಿನ ವಿಶ್ವಕಪ್ ಟೂರ್ನಿಯ ಬಹುತೇಕ ಟಿಕೆಟ್’ಗಳು ಮಾರಾಟವಾಗಿವೆ ಎಂದು ಕ್ಯಾಂಪ್’ಬೆಲ್ ತಿಳಿಸಿದ್ದಾರೆ.

Most of 2019 World Cup tickets are sold out, Says  ICC
Author
Dubai - United Arab Emirates, First Published Nov 29, 2018, 1:35 PM IST
  • Facebook
  • Twitter
  • Whatsapp

ನವದೆಹಲಿ[ನ.29]: 2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಆಡಲಿರುವ ಎಲ್ಲ ಪಂದ್ಯಗಳ ಟಿಕೆಟ್’ಗಳು ಈಗಾಗಲೇ ಮಾರಾಟವಾಗಿವೆ. ಅದರಲ್ಲೂ ಪಾಕಿಸ್ತಾನ ವಿರುದ್ಧ ಜೂನ್ 16ರಂದು ನಡೆಯಲಿರುವ ಪಂದ್ಯದ ಟಿಕೆಟ್’ಗಳು ಸಂಪೂರ್ಣ ಮಾರಾಟಗೊಂಡಿವೆ ಎಂದು ಐಸಿಸಿ ಅಧಿಕಾರಿ ಕ್ಯಾಂಪ್’ಬೆಲ್ ಜೆಮೀಸನ್ ತಿಳಿಸಿದ್ದಾರೆ.

ಇಲ್ಲಿದೆ 2019ರ ಕ್ರಿಕೆಟ್ ವಿಶ್ವಕಪ್ ಸಂಪೂರ್ಣ ವೇಳಾಪಟ್ಟಿ 

ಇಂಗ್ಲೆಂಡ್’ನಲ್ಲಿ ಮೇ 30ರಿಂದ ಜುಲೈ 14ರವರೆಗೆ ನಡೆಯಲಿರುವ 2019ರ ಏಕದಿನ ವಿಶ್ವಕಪ್ ಟೂರ್ನಿಯ ಬಹುತೇಕ ಟಿಕೆಟ್’ಗಳು ಮಾರಾಟವಾಗಿವೆ ಎಂದು ಕ್ಯಾಂಪ್’ಬೆಲ್ ತಿಳಿಸಿದ್ದಾರೆ.

ಮೇ 30ರಂದು ನಡೆಯುವ ಉದ್ಘಾಟನಾ ಪಂದ್ಯದಲ್ಲಿ ವಿಶ್ವಕಪ್’ಗೆ ಆತಿಥ್ಯ ವಹಿಸಿರುವ ಇಂಗ್ಲೆಂಡ್ ತಂಡವು ದಕ್ಷಿಣ ಆಫ್ರಿಕಾ ಎದುರು ಕಾದಾಡಲಿದೆ.
 

Follow Us:
Download App:
  • android
  • ios