ಕೌಂಟಿ ಕ್ರಿಕೆಟ್'ನತ್ತ ಮುಖ ಮಾಡಿದ ಮಾರ್ಕೆಲ್; ಕೋಲ್ಪಾಕ್ ಒಪ್ಪಂದಕ್ಕೆ ಸಹಿ

Morne Morkel signs two year Kolpak deal with Surrey
Highlights

2019ರ ಋತು ಅಂತ್ಯದವರೆಗೂ ಅವರು ತಂಡದ ಪರ ಆಡಲಿದ್ದಾರೆ ಎಂದು ಸರ್ರೆ ತಂಡ ಖಚಿತಪಡಿಸಿದೆ. 33 ವರ್ಷದ ಮಾರ್ಕೆಲ್ ದಕ್ಷಿಣ ಆಫ್ರಿಕಾ ಪರ 86 ಟೆಸ್ಟ್, 117 ಏಕದಿನ ಹಾಗೂ 44 ಟಿ20 ಪಂದ್ಯಗಳನ್ನಾಡಿದ್ದಾರೆ.

ಲಂಡನ್(ಏ.11): ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ದ.ಆಫ್ರಿಕಾದ ವೇಗಿ ಮೊರ್ನೆ ಮಾರ್ಕೆಲ್, ಇಂಗ್ಲೆಂಡ್ ಕೌಂಟಿಯತ್ತ ಮುಖ ಮಾಡಿದ್ದು ಸರ್ರೆ ತಂಡದೊಂದಿಗೆ ಕೋಲ್ಪಾಕ್ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

2019ರ ಋತು ಅಂತ್ಯದವರೆಗೂ ಅವರು ತಂಡದ ಪರ ಆಡಲಿದ್ದಾರೆ ಎಂದು ಸರ್ರೆ ತಂಡ ಖಚಿತಪಡಿಸಿದೆ. 33 ವರ್ಷದ ಮಾರ್ಕೆಲ್ ದಕ್ಷಿಣ ಆಫ್ರಿಕಾ ಪರ 86 ಟೆಸ್ಟ್, 117 ಏಕದಿನ ಹಾಗೂ 44 ಟಿ20 ಪಂದ್ಯಗಳನ್ನಾಡಿದ್ದಾರೆ.

ಏನಿದು ಕೋಲ್ಪಾಕ್ ಒಪ್ಪಂದ?: ಈ ಒಪ್ಪಂದ ಪ್ರಕಾರ, ಆಟಗಾರ ಅಂತಾರಾಷ್ಟ್ರೀಯ ಕ್ರಿಕೆಟ್‌'ನಿಂದ ನಿವೃತ್ತಿ ಪಡೆಯಬೇಕು. ಜತೆಗೆ ವಿಶ್ವದ ಮತ್ಯಾವುದೇ ತಂಡಗಳ ಪರವೂ ಸಹ ಆಡುವಂತಿಲ್ಲ.

loader