ಶಮಿಯಿಂದ ಮ್ಯಾಚ್ ಫಿಕ್ಸಿಂಗ್..! ಪತ್ನಿಗೆ ತಲೆ ಕೆಟ್ಟಿದೆ ಎಂದ ವೇಗಿ

Mohammed Shami slams Hasin Jahan match fixing claims
Highlights

‘ನನ್ನ ಬಳಿ ಸಾಕ್ಷ್ಯವಿದೆ. ಮಾಧ್ಯಮದವರು ದುಬೈನಲ್ಲಿ ಶಮಿ ಹಾಗೂ ಅಲಿಶ್ಬಾ ಭೇಟಿಯಾದ ಹೋಟೆಲ್‌'ಗೆ ಭೇಟಿ ನೀಡಿ ಪರಿಶೀಲಿಸಬೇಕು. ಹೋಟೆಲ್‌'ನಲ್ಲಿ ಅವರಿಬ್ಬರು ಒಂದೇ ಕೋಣೆಯಲ್ಲಿ ಇದ್ದರೋ ಇಲ್ಲವೋ ಎಂಬುದು ತಿಳಿಯುತ್ತದೆ’ ಎಂದು ಹಸೀನ್ ಹೇಳಿದ್ದಾರೆ.

ನವದೆಹಲಿ(ಮಾ.09): ಕ್ರಿಕೆಟಿಗ ಮೊಹಮದ್ ಶಮಿಗೆ ಅಕ್ರಮ ಸಂಬಂಧವಿರುವುದಾಗಿ ಆರೋಪಿಸಿದ್ದ ಅವರ ಪತ್ನಿ ಹಸೀನ್ ಜಹಾನ್, ಇದೀಗ ಅವರ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ ಮಾಡಿದ್ದಾರೆ.

‘ಶಮಿ ಪಾಕಿಸ್ತಾನಿ ಯುವತಿ ಅಲಿಶ್ಬಾ ಎಂಬುವಳಿಂದ ಹಣ ಪಡೆದಿದ್ದಾರೆ. ಅವರು ಮ್ಯಾಚ್ ಫಿಕ್ಸಿಂಗ್‌'ನಲ್ಲಿ ತೊಡಗಿರಬಹುದು. ಆಕೆಯಿಂದ ಏಕೆ ಹಣ ಪಡೆದಿದ್ದೇನೆ ಎಂದು ಶಮಿ ನನಗೆ ಯಾವತ್ತೂ ಹೇಳಿಲ್ಲ. ಆತ ನನಗೆ ಮೋಸ ಮಾಡಬಹುದು ಎಂದಾದಲ್ಲಿ, ದೇಶಕ್ಕೆ ಮೋಸ ಮಾಡಿದ್ದರೂ ಯಾವುದೇ ಅಶ್ಚರ್ಯವಿಲ್ಲ’ ಎಂದು ಹಸೀನ್ ಖಾಸಗಿ ಸುದ್ದಿ ವಾಹಿನಿಗೆ ಹೇಳಿಕೆ ನೀಡಿದ್ದಾರೆ.

‘ನನ್ನ ಬಳಿ ಸಾಕ್ಷ್ಯವಿದೆ. ಮಾಧ್ಯಮದವರು ದುಬೈನಲ್ಲಿ ಶಮಿ ಹಾಗೂ ಅಲಿಶ್ಬಾ ಭೇಟಿಯಾದ ಹೋಟೆಲ್‌'ಗೆ ಭೇಟಿ ನೀಡಿ ಪರಿಶೀಲಿಸಬೇಕು. ಹೋಟೆಲ್‌'ನಲ್ಲಿ ಅವರಿಬ್ಬರು ಒಂದೇ ಕೋಣೆಯಲ್ಲಿ ಇದ್ದರೋ ಇಲ್ಲವೋ ಎಂಬುದು ತಿಳಿಯುತ್ತದೆ’ ಎಂದು ಹಸೀನ್ ಹೇಳಿದ್ದಾರೆ. ‘ಶಮಿ ಆಕೆಯಿಂದ ಹಣ ಪಡೆದಿದ್ದೇನೆ ಎಂದು ಹೇಳಿರುವ ದಾಖಲೆ ನನ್ನ ಬಳಿ ಇದೆ. ಆದರೆ ಆಕೆಯಿಂದ ಶಮಿ ಹಣ ಪಡೆಯುವ ಅವಶ್ಯಕತೆಯಾದರೂ ಏನಿತ್ತು?’ ಎಂದು ಪ್ರಶ್ನಿಸಿದ್ದಾರೆ.

ಪತ್ನಿಗೆ ತಲೆ ಕೆಟ್ಟಿದೆ:

ಹಸೀನ್‌ರ ಆರೋಪಗಳಿಗೆ ಉತ್ತರಿಸಿರುವ ಶಮಿ, ‘ಆಕೆ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾಳೆ. ದ.ಆಫ್ರಿಕಾದಿಂದ ವಾಪಸ್ ಬಂದ ಮೇಲೂ ಎಲ್ಲವೂ ಸರಿಯಿತ್ತು. ಇದಕ್ಕಿದ್ದ ಹಾಗೇ ಈಗೇನಾಯಿತು ಎಂದು ಅರ್ಥವಾಗುತ್ತಿಲ್ಲ’ ಎಂದಿದ್ದಾರೆ.

loader