ಬಾಲಿವುಡ್‌ಗೆ ಪದಾರ್ಪಣೆ ಮಾಡ್ತಾರ ಕ್ರಿಕೆಟಿಗ ಮೊಹಮ್ಮದ್ ಶಮಿ ಪತ್ನಿ ಹಸಿನ್ ?

ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಹಾಗೂ ಪತ್ನಿ ಹಸಿನ್ ಜಹಾನ್ ಸಂಬಂಧ ಹಳಸಿ ದಿನಗಳೇ ಉರುಳಿವೆ. ಶಮಿ ಹಾಗೂ ಪತ್ನಿ ಹಸಿನ್ ಈಗ ಜೊತೆಯಾಗಿಲ್ಲ. ಆದರೆ ಇಬ್ಬರ ಕಾನೂನು ಹೋರಾಟ ಮುಂದುವರಿಸಿದೆ. ಇದರ ಬೆನ್ನಲ್ಲೇ, ಹಸಿನ್ ಈಗ ಬಾಲಿವುಡ್‌ ರಂಗಕ್ಕೆ ಕಾಲಿಟ್ಟಿದ್ದಾರೆ. ಹಸಿನ್ ನಟಿಸುತ್ತಿರುವ ಚಿತ್ರ ಯಾವುದು? ಇಲ್ಲಿದೆ ವಿವರ.

Mohammed Shami’s wife Hasin Jahan set to make Bollywood debut

ಕೋಲ್ಕತ್ತಾ(ಜು.09): ಕ್ರಿಕೆಟಿಗ ಮೊಹಮ್ಮದ್ ಶಮಿ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ಪತ್ನಿ ಹಸಿನ್ ಜಹಾನ್ ಕಾನೂನು ಹೋರಾಟ ಮುಂದುವರಿಸಿದ್ದಾರೆ. ಶಮಿ ಬೇರೆ ಯುವತಿ ಜೊತೆ ರಹಸ್ಯ ಮದುವೆಯಾಗಿದ್ದಾರೆ ಅನ್ನೋ ಆರೋಪ ಮಾಡಿದ್ದ ಹಸಿನ್ ಇದೀಗ ಶಮಿಯಿಂದ ದೂರ ಉಳಿದಿದ್ದಾರೆ.

ಇದನ್ನು ಓದಿ: ಕ್ರಿಕೆಟಿಗ ಶಮಿ ಜೊತೆಗಿನ ಕಿತ್ತಾಟದ ಬಳಿಕ ಪತ್ನಿ ಹಸಿನ್ ಈಗ ಏನು ಮಾಡುತ್ತಿದ್ದಾರೆ ?

ಮೊಹಮ್ಮದ್ ಶಮಿ ವಿರುದ್ಧ ಮಾನಸಿಕ ಕಿರುಕುಳ ಸೇರಿದಂತೆ ಹಲವು ಆರೋಪ ಮಾಡಿರುವ ಹಸಿನ್ ಇದೀಗ ಬಾಲಿವುಡ್ ಚಿತ್ರಕ್ಕೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ.

 

 

ಶಮಿಯಿಂದ ದೂರಉಳಿದ ಹಸಿನ್ ಮಾಡೆಲಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಅಷ್ಟೇ ವೇಗದಲ್ಲಿ ಹಸಿನ್ ಇದೀಗ ಬಾಲಿವುಡ್ ಚಿತ್ರವೊಂದಕ್ಕೂ ಸಹಿ ಹಾಕಿದ್ದಾರೆ. ಬಾಲಿವುಡ್ ನಿರ್ದೇಶಕ ಅಮ್ಜದ್ ಖಾನ್ ನಿರ್ದೇಶನದ ಫತ್ವಾ ಚಿತ್ರದಲ್ಲಿ ಹಸಿನ್ ಜಹಾನ್ ಕಾಣಿಸಿಕೊಳ್ಳುತ್ತಿದ್ದಾರೆ.

 

 

ಪತ್ರಕರ್ತೆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಹಸಿನ್ ಜಹಾನ್ ಪಾತ್ರಕ್ಕಾಗಿ ಕಸರತ್ತು ಆರಂಭಿಸಿದ್ದಾರೆ. ನನ್ನ ಹಾಗೂ ಪುತ್ರಿಯ ಬದುಕಿಗೆ ನಾನು ಏನಾದರು ಮಾಡಲೇಬೇಕಿತ್ತು. ಹೀಗಾಗಿ ನಾನೇ ಅಮ್ಜದ್ ಖಾನ್ ಅವರಲ್ಲಿ ಕೇಳಿಕೊಂಡೆ. ಅಮ್ಜದ್ ಖಾನ್ ತಕ್ಷಣವೇ ಒಪ್ಪಿಕೊಂಡು ನನಗೆ ಸೂಕ್ತ ಪಾತ್ರ ನೀಡಿದ್ದಾರೆ ಎಂದು ಹಸಿನ್ ಜಹಾನ್ ಡಿಎನ್‍‌ಎ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

 

 

Latest Videos
Follow Us:
Download App:
  • android
  • ios