ಕೈಫ್ 13 ಟೆಸ್ಟ್ ಮತ್ತು 125 ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ.
ನವದೆಹಲಿ(ಜ.01): ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಸೂರ್ಯ ನಮಸ್ಕಾರ ಮಾಡುವ ಫೊಟೋಗಳನ್ನು ಸಾಮಾಜಿಕ ಜಾಲತಾಣವಾದ ಟ್ವೀಟರ್'ನಲ್ಲಿ ಪ್ರಕಟಿಸಿರುವುದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ಕೈಫ್ ಯೋಗ ಮತ್ತು ಸೂರ್ಯ ನಮಸ್ಕಾರ ಮಾಡುವ 4 ಫೊಟೋಗಳು ಇಸ್ಲಾಂ ಧರ್ಮಕ್ಕೆ ವಿರುದ್ಧವಾಗಿವೆ ಎಂದು ಕೆಲವು ಕಿಡಿಗೇಡಿಗಳು ಟ್ವೀಟ್ ಮಾಡುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಕೈಫ್, ಅಲ್ಲಾ ನನ್ನ ಹೃದಯಲ್ಲಿದ್ದಾನೆ. ಯೋಗ ಮತ್ತು ಸೂರ್ಯ ನಮಸ್ಕಾರ ಮಾಡುವುದರಲ್ಲಿ ಯಾವುದೇ ಧರ್ಮ ಇರುವುದಿಲ್ಲ ಎಂದಿದ್ದಾರೆ.
ಕೈಫ್ 13 ಟೆಸ್ಟ್ ಮತ್ತು 125 ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ.
