ಪಾಕ್ ಕ್ರಿಕೆಟಿಗನಿಗೆ ದುಬೈ ವಿಮಾನ ನಿಲ್ದಾಣದಲ್ಲಿ ಪ್ರವೇಶ ನಿರಾಕರಣೆ

Mohammad Asif refused entry at Dubai Airport
Highlights

ಶಾರ್ಜಾದಲ್ಲಿ ನಡೆಯಲಿರುವ ಟಿ20  ದ್ಯಾವಳಿಯೊಂದರಲ್ಲಿ ಪಾಲ್ಗೊಳ್ಳಲು ಆಸಿಫ್, ಯುಎಇಗೆ ತೆರಳಿದ್ದರು ಎಂದು ತಿಳಿದು ಬಂದಿದೆ.

ಕರಾಚಿ(ಮಾ.30): ಸ್ಪಾಟ್ ಫಿಕ್ಸಿಂಗ್ ಪ್ರಕರಣದಡಿ 5 ವರ್ಷ ನಿಷೇಧಕ್ಕೆ ಗುರಿಯಾಗಿದ್ದ ಪಾಕಿಸ್ತಾನದ ವೇಗಿ ಮುಹಮ್ಮದ್ ಆಸಿಫ್, ದುಬೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವಮಾನಕ್ಕೆ ಗುರಿಯಾಗಿದ್ದಾರೆ. ಸೂಕ್ತ ದಾಖಲೆಗಳಿಲ್ಲದ ಕಾರಣ ವಲಸೆ ಅಧಿಕಾರಿಗಳು ಆಸಿಫ್‌ಗೆ ದುಬೈ ಪ್ರವೇಶ ನಿರಾಕರಿಸಿದ್ದಾರೆ. ಶಾರ್ಜಾದಲ್ಲಿ ನಡೆಯಲಿರುವ ಟಿ20 ಪಂದ್ಯಾವಳಿಯೊಂದರಲ್ಲಿ ಪಾಲ್ಗೊಳ್ಳಲು ಆಸಿಫ್, ಯುಎಇಗೆ ತೆರಳಿದ್ದರು ಎಂದು ತಿಳಿದು ಬಂದಿದೆ.

loader