ಲಂಡನ್(ಜು.28): ಪಾಕಿಸ್ತಾನ ವೇಗಿ ಮೊಹಮ್ಮದ್ ಅಮೀರ್ ಈಗಾಗಲೇ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿ ಪಾಕಿಸ್ತಾನ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. 27 ವರ್ಷದ ಅಮೀರ್ ನಿರ್ಧಾರ ಪಾಕಿಸ್ತಾನ ಮಾತ್ರವಲ್ಲ ವಿಶ್ವಕ್ರಿಕೆಟ್‌ಗೂ ಅಚ್ಚರಿ ತಂದಿತ್ತು. ಇದೀಗ ಅಮೀರ್ ಪಾಕಿಸ್ತಾನ ತೊರೆದು ಇಂಗ್ಲೆಂಡ್‌ನಲ್ಲೇ ವಾಸ್ತವ್ಯ ಹೂಡಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ: ಟೆಸ್ಟ್‌ ಕ್ರಿಕೆಟ್‌ಗೆ ಪಾಕಿಸ್ತಾನ ವೇಗಿ ಮೊಹಮ್ಮದ್ ಅಮೀರ್ ವಿದಾಯ!

ಬ್ರಿಟೀಷ್ ಪಾಸ್‌ಪೋರ್ಟ್ಗಾಗಿ ಅಮೀರ್ ಅರ್ಜಿ ಸಲ್ಲಿಸಿದ್ದಾರೆ. 2016ರಲ್ಲಿ ಮೊಹಮ್ಮದ್ ಅಮೀರ್ ಇಂಗ್ಲೆಂಡ್‌ನ ನರ್ಗಿಸ್ ಮಲಿಕ್ ಮದುವೆಯಾಗಿದ್ದಾರೆ. ಪತ್ನಿ ವೀಸಾದಲ್ಲಿ ಅಮೀರ್ ಸತತ 30 ತಿಂಗಳು ಇಂಗ್ಲೆಂಡ್‌ನಲ್ಲಿ ಉಳಿದುಕೊಳ್ಳುವ ಅವಕಾಶವಿದೆ. ಆದರೆ ಇದೀಗ ಇಂಗ್ಲೆಂಡ್‌ನಲ್ಲಿ ಖಾಯಂ ಆಗಿ ನೆಲೆಸಲು ಅಮೀರ್ ನಿರ್ಧರಿಸಿದ್ದಾರೆ.

ಇದನ್ನೂ ಓದಿ: ವಿರಾಟ್ ಕೊಹ್ಲಿ ವಿಕೆಟ್ ಕಬಳಿಸಲು ಪಾಕ್ ವೇಗಿ ಬಳಿ ಇದೆ ಟಿಪ್ಸ್!

ಸದ್ಯ  ಪಾಕಿಸ್ತಾನಕ್ಕಿಂತ ಅಮೀರ್ ಪತ್ನಿ ಜೊತೆಗೆ ಇಂಗ್ಲೆಂಡ್‌ನಲ್ಲೇ ಹೆಚ್ಚು ಕಾಲ ಉಳಿದುಕೊಳ್ಳುತ್ತಿದ್ದಾರೆ. ಇಷ್ಟೇ ಅಲ್ಲ ಕಳೆದ ವರ್ಷ ಇಂಗ್ಲೆಂಡ್ ಕೌಂಟಿ ಕೂಡ ಆಡಿದ್ದರು. ಪಾಕಿಸ್ತಾನದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಕ್ರೀಯವಾಗಿಲ್ಲ. ಹೀಗಾಗಿ ಪಾಕ್ ತನ್ನ ತವರಿನ ಪಂದ್ಯವನ್ನು ದುಬೈನಲ್ಲಿ ಆಡುತ್ತಿದೆ. ಇನ್ನು ಪತ್ನಿ ಕೂಡ ಇಂಗ್ಲೆಂಡ್‌ನಲ್ಲಿ ನೆಲೆಸಿರುವ ಕಾರಣ ಅಮೀರ್ ಇಂಗ್ಲೆಂಡ್‌ನಲ್ಲಿ ವಾಸ್ತವ್ಯ ಹೂಡಲು ನಿರ್ಧರಿಸಿದ್ದಾರೆ.