ಕರಾಚಿ(ಜು.26): ವಿಶ್ವಕಪ್ ಟೂರ್ನಿಯಲ್ಲಿ ಲೀಗ್ ಹಂತದಿಂದ ಹೊರಬಿದ್ದ ಪಾಕಿಸ್ತಾನ ತಂಡದಲ್ಲಿ ಕೆಲ ಬದಲಾವಣೆಗಳು ಆಗುತ್ತಿವೆ. ಇದರ ಬೆನ್ನಲ್ಲೇ ಪಾಕಿಸ್ತಾನ ವೇಗಿ ಮೊಹಮ್ಮದ್ ಅಮೀರ್ ಟೆಸ್ಟ್ ಮಾದರಿಗೆ ವಿದಾಯ ಹೇಳಿದ್ದಾರೆ. ನಿಗದಿತ ಓವರ್ ಕ್ರಿಕೆಟ್‌ನಲ್ಲಿ ಹೆಚ್ಚಿನ ಗಮನ ಕೇಂದ್ರಿಕರಿಸಲು ಟೆಸ್ಟ್ ಮಾದರಿಗೆ ವಿದಾಯ ಹೇಳುತ್ತಿರುವುದಾಗಿ 27 ವರ್ಷದ ಮೊಹಮ್ಮದ್ ಅಮೀರ್ ಹೇಳಿದ್ದಾರೆ.

ಇದನ್ನೂ ಓದಿ: ವಿರಾಟ್ ಕೊಹ್ಲಿ-ಮೊಹಮ್ಮದ್ ಅಮೀರ್ ಗೆಳೆತನದ ಹಿಂದಿದೆ ರೋಚಕ ಸ್ಟೋರಿ!

ಪಾಕಿಸ್ತಾನ ಕಂಡ ಯಶಸ್ವಿ ಬೌಲರ್ ಅಮೀರ್ ದಿಢೀರ್ ವಿದಾಯ ಅಚ್ಚರಿ ಮೂಡಿಸಿದೆ. 2010ರಲ್ಲಿ ನಡೆಸಿದ ಸ್ಫಾಟ್ ಫಿಕ್ಸಿಂಗ್‌ನಿಂದ ನಿಷೇಧಕ್ಕೊಳಗಾದ ಅಮೀರ್ ಮತ್ತೆ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದರು. ಆದರೆ ನಿಗದಿತ ಓವರ್ ಕ್ರಿಕೆಟ್‌‌ನಲ್ಲಿ ಹೆಚ್ಚು ಯಶಸ್ಸು ಸಾಧಿಸಿದ ಅಮೀರ್ ಟೆಸ್ಟ್‌ನಲ್ಲಿ ನಿರೀಕ್ಷಿತ ಪ್ರದರ್ಶನ ಮೂಡಿ ಬರಲಿಲ್ಲ. 36 ಟೆಸ್ಟ್ ಪಂದ್ಯದಿಂದ ಅಮೀರ್ 119 ವಿಕೆಟ್ ಉರುಳಿಸಿದ್ದಾರೆ.

ಇದನ್ನೂ ಓದಿ: ಅಫ್ರಿದಿ ಕಪಾಳಕ್ಕೆ ಬಾರಿಸಿದ ಮೇಲೆ ಸ್ಪಾಟ್‌ ಫಿಕ್ಸಿಂಗ್‌ ಬಾಯ್ಬಿಟ್ಟಿದ ಆಮೀರ್..!

ಪಾಕಿಸ್ತಾನ ಏಕದಿನ ಹಾಗೂ ಟಿ20 ತಂಡದಲ್ಲಿ ಪ್ರಮುಖ ವೇಗಿಯಾಗಿರುವ ಅಮೀರ್ ಐತಿಹಾಸಿಕ ಗೆಲುವಿಗೆ ಕಾರಣರಾಗಿದ್ದಾರೆ. 2017ರಲ್ಲಿ ಪಾಕ್ ತಂಡದ ಚಾಂಪಿಯನ್ಸ್ ಟ್ರೋಫಿ ಗೆಲುವಿನಲ್ಲಿ ಅಮೀರ್ ಪ್ರಮುಖ ಪಾತ್ರ ನಿರ್ವಹಿಸಿದ್ದರು. 2019ರ ವಿಶ್ವಕಪ್ ಟೂರ್ನಿಗೆ ಅಂತಿಮ ಹಂತದಲ್ಲಿ ಅಮೀರ್ ಆಯ್ಕೆಯಾಗಿದ್ದರು. ಅದ್ಭುತ ಪ್ರದರ್ಶನ ನೀಡಿದ ಅಮೀರ್ 17 ವಿಕೆಟ್ ಕಬಳಿಸಿದ್ದರು.