2017ರ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಫೈನಲ್’ವರೆಗೆ ಮುನ್ನಡೆಸಲು ಯಶಸ್ವಿಯಾಗಿದ್ದ ಮಿಥಾಲಿ ರಾಜ್ ಅವರ ಸ್ಪೂರ್ತಿದಾಯಕ ಜೀವನ ಬೆಳ್ಳಿತೆರೆ ಮೇಲೆ ಮೂಡಿಬರಲಿದೆ.

ನವದೆಹಲಿ(ಸೆ.26): ಟೀಂ ಇಂಡಿಯಾ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿಯ ಜೀವನಾಧಾರಿತ ಚಿತ್ರ ಎಂ.ಎಸ್. ಧೋನಿ ಅನ್ ಟೂಲ್ಡ್ ಸ್ಟೋರಿ ಭಾರಿ ಜನಪ್ರಿಯವಾದ ಬಳಿಕ ಸಚಿನ್ ತೆಂಡೂಲ್ಕರ್ ಚಿತ್ರ ಕೂಡಾ ತೆರೆಗೆ ಅಪ್ಪಳಿಸಿತ್ತು. ಇದೀಗ ಭಾರತ ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್ ಜೀವನಾಧಾರಿತ ಸಿನಿಮಾ ತೆರೆ ಕಾಣಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

2017ರ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಫೈನಲ್’ವರೆಗೆ ಮುನ್ನಡೆಸಲು ಯಶಸ್ವಿಯಾಗಿದ್ದ ಮಿಥಾಲಿ ರಾಜ್ ಅವರ ಸ್ಪೂರ್ತಿದಾಯಕ ಜೀವನ ಬೆಳ್ಳಿತೆರೆ ಮೇಲೆ ಮೂಡಿಬರಲಿದೆ.

ವೈಕಾಮ್ 18 ಮೋಶನ್ ಬ್ಯಾನರ್ ಮಿಥಾಲಿ ರಾಜ್ ಜೀವನಾಧರಿತ ಸಿನಿಮಾದ ಹಕ್ಕನ್ನು ಪಡೆದುಕೊಂಡಿದ್ದು, ಸಿನಿಮಾ ಯಾವಾಗ ತೆರೆಕಾಣಲಿದೆ ಎನ್ನುವುದಕ್ಕೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ.