9ನೇ ಆವೃತ್ತಿಯ ಕೌನ್ ಬನೇಗಾ ಕರೋಡ್'ಪತಿ ಕಾರ್ಯಕ್ರಮದಲ್ಲಿ ಮಿಥಾಲಿ ರಾಜ್, ಜೂಲನ್ ಗೋಸ್ವಾಮಿ, ಹರ್ಮನ್'ಪ್ರೀತ್ ಕೌರ್, ವೇದಾ ಕೃಷ್ಣಮೂರ್ತಿ, ಪೂನಮ್ ರಾವತ್, ಸ್ಮತಿ ಮಂಧನಾ ಹಾಗೂ ದೀಪ್ತಿ ಶರ್ಮಾ ಭಾಗವಹಿಸಿದ್ದರು.
ನವದೆಹಲಿ(ಸೆ.03): ಭಾರತ ಮಹಿಳಾ ಕ್ರಿಕೆಟರ್'ಗಳು ಬಾಲಿವುಡ್ ದಿಗ್ಗಜ ಅಮಿತಾಭ್ ಬಚ್ಚನ್ ನಡೆಸಿಕೊಡುವ ಜನಪ್ರಿಯ ಟಿವಿ ರಸಪ್ರಶ್ನೆ ಕಾರ್ಯಕ್ರಮ ‘ಕೌನ್ ಬನೇಗಾ ಕರೋಡ್'ಪತಿ’ಯಲ್ಲಿ ಪಾಲ್ಗೊಂಡಿದ್ದರು.
9ನೇ ಆವೃತ್ತಿಯ ಕೌನ್ ಬನೇಗಾ ಕರೋಡ್'ಪತಿ ಕಾರ್ಯಕ್ರಮದಲ್ಲಿ ಮಿಥಾಲಿ ರಾಜ್, ಜೂಲನ್ ಗೋಸ್ವಾಮಿ, ಹರ್ಮನ್'ಪ್ರೀತ್ ಕೌರ್, ವೇದಾ ಕೃಷ್ಣಮೂರ್ತಿ, ಪೂನಮ್ ರಾವತ್, ಸ್ಮತಿ ಮಂಧನಾ ಹಾಗೂ ದೀಪ್ತಿ ಶರ್ಮಾ ಭಾಗವಹಿಸಿದ್ದರು.
ಮೂಲಗಳ ಪ್ರಕಾರ ಸ್ಮತಿ ಹಾಗೂ ಪೂನಮ್ ಒಟ್ಟಿಗೆ ಪ್ರಶ್ನೆಗಳಿಗೆ ಉತ್ತರಿಸಿದರೆ, ವೇದಾ ಹಾಗೂ ಮಿಥಾಲಿ ಒಟ್ಟಿಗೆ ಹಾಟ್'ಸೀಟ್'ನಲ್ಲಿ ಕೂತಿದ್ದರು. ಇನ್ನು ಜೂಲನ್ ಗೋಸ್ವಾಮಿ ಹಾಗೂ ಹರ್ಮನ್'ಪ್ರೀತ್ ಕ್ರಿಕೆಟ್'ಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿ ₹3.2 ಲಕ್ಷ ಗೆದ್ದರು ಎನ್ನಲಾಗಿದೆ.
ಈ ಬಗ್ಗೆ ಕನ್ನಡತಿ ವೇದಾ ಕೃಷ್ಣಮೂರ್ತಿ ಟ್ವೀಟ್ ಮಾಡಿದ್ದು ಹೀಗೆ..