Asianet Suvarna News Asianet Suvarna News

ಕೊಹ್ಲಿ ದಾಖಲೆ ಮೀರಿಸಿ ಹೊಸ ದಾಖಲೆ ನಿರ್ಮಿಸಿದ ಮಿಥಾಲಿ ರಾಜ್

ಕೌಲಾಲಂಪುರ್'ನಲ್ಲಿ ನಡೆಯುತ್ತಿರುವ ಮಹಿಳಾ ಟಿ20 ಏಷ್ಯಾ ಕಪ್ ಚಾಂಪಿಯನ್ಸ್ ಟ್ರೋಫಿಯ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ  23 ರನ್ ಗಳಿಸುವ ಮೂಲಕ 2000 ರನ್ ಗಡಿ ದಾಟಿದರು. ಈ ಸಾಧನೆ ಮಾಡಿದ ವಿಶ್ವ ಮಹಿಳಾ ಕ್ರಿಕೆಟಿಗರಲ್ಲಿ ಮಿಥಾಲಿ 4ನೇಯವರು.

Mithali Raj edges Virat Kohli, becomes first India cricketer to score 2000 T20I runs

ನವದೆಹಲಿ(ಜೂ.07): ಭಾರತದ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಟಿ20 ಕ್ರಿಕೆಟಿನಲ್ಲಿ  2 ಸಾವಿರ ರನ್ ಪೇರಿಸುವುದರ ಮೂಲಕ ಭಾರತದ ಮಹಿಳಾ ಕ್ರಿಕೆಟಿನಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ. 

ಕೌಲಾಲಂಪುರ್'ನಲ್ಲಿ ನಡೆಯುತ್ತಿರುವ ಮಹಿಳಾ ಟಿ20 ಏಷ್ಯಾ ಕಪ್ ಚಾಂಪಿಯನ್ಸ್ ಟ್ರೋಫಿಯ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ  23 ರನ್ ಗಳಿಸುವ ಮೂಲಕ 2000 ರನ್ ಗಡಿ ದಾಟಿದರು. ಈ ಸಾಧನೆ ಮಾಡಿದ ವಿಶ್ವ ಮಹಿಳಾ ಕ್ರಿಕೆಟಿಗರಲ್ಲಿ ಮಿಥಾಲಿ 4ನೇಯವರು.

ಈ ಮೊದಲು ಇಂಗ್ಲೆಂಡಿನ ಕ್ಯಾರ್ಲೋಟ್ ಎಡ್ವರ್ಡ್, ವೆಸ್ಟ್ ಇಂಡೀಸಿನ ಸ್ಟಫೈನಿ ಟೈಲರ್  ಹಾಗೂ ನ್ಯೂಜಿಲೆಂಡಿನ ಸುಜೈ ಬಾಟೆಸ್  2 ಸಾವಿರ ರನ್ ಪೂರೈಸಿದ್ದರು. 
35 ವರ್ಷದ ಮಿಥಾಲಿ 38.01 ಸರಾಸರಿಯಲ್ಲಿ 14 ಅರ್ಧ ಶತಕಗಳು ಬಾರಿಸಿದ್ದು 74 ಅತ್ಯುತ್ತಮ ಸ್ಕೋರ್ ಆಗಿದೆ.  

ಪುರುಷರ ಟಿ20 ಕ್ರಿಕೆಟಿನಲ್ಲಿ ನ್ಯೂಜಿಲೆಂಡಿನ ಮಾರ್ಟಿನ್ ಗುಪ್ಟಿಲ್, ಬ್ರೆಂಡನ್ ಮೆಕಲಮ್ 2 ಸಾವಿರ ಪೂರೈಸಿದ್ದರೆ  ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ 1983 ಸನಿಹದಲ್ಲಿದ್ದಾರೆ. ಮಿಥಾಲಿ ಸಾಧನೆಗೆ ಬಿಸಿಸಿಐ ಹಾಗೂ ಐಸಿಸಿ ಟ್ವಿಟರ್ ಮೂಲಕ ಅಭಿನಂದನೆ ಸಲ್ಲಿಸಿದೆ.

Follow Us:
Download App:
  • android
  • ios