ಸಿಡ್ನಿ[ಜ.11]: ಜ. 12ರಿಂದ ಭಾರತ ವಿರುದ್ಧ ಆರಂಭವಾಗಲಿರುವ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಿಂದ ಆಸ್ಟ್ರೇಲಿಯಾದ ಆಲ್ರೌಂಡರ್ ಮಿಚೆಲ್ ಮಾರ್ಷ್ ಹೊರಬಿದ್ದಿದ್ದಾರೆ.

ಭಾರತ ತಂಡಕ್ಕೆ ಪಾಕ್‌ ಪ್ರಧಾನಿ ಅಭಿನಂದನೆ..!

ಅನಾರೋಗ್ಯದ ಕಾರಣದಿಂದ ಮಿಚೆಲ್ ಮಾರ್ಷ್, ಭಾರತ ವಿರುದ್ಧದ ಮೊದಲ ಪಂದ್ಯದಲ್ಲಿ ಆಡುತ್ತಿಲ್ಲ. ಮಿಚೆಲ್ ಮಾರ್ಷ್ ಗೈರು ಹಾಜರಿಯಲ್ಲಿ ಆಷ್ಟನ್ ಟರ್ನರ್ ತಂಡವನ್ನು ಕೂಡಿಕೊಂಡಿದ್ದಾರೆ. ಮಾರ್ಷ್ ಕಳೆದ 2 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕೋಚ್ ಲ್ಯಾಂಗರ್ ಹೇಳಿದ್ದಾರೆ. 

ಆಸಿಸ್ ವಿರುದ್ಧದ ತವರಿನ ಸರಣಿಯ ವೇಳಾಪಟ್ಟಿ ಪ್ರಕಟ: ಬೆಂಗಳೂರಲ್ಲಿ ಮೊದಲ ಪಂದ್ಯ

ಜ.15 ಮತ್ತು ಜ.18 ರಂದು ನಡೆಯಲಿರುವ ಕೊನೆಯ 2 ಏಕದಿನ ಪಂದ್ಯಗಳಿಗೆ  ಮಾರ್ಷ್ ಅವರ ಆರೋಗ್ಯ ಪರಿಸ್ಥಿತಿಯನ್ನು ನೋಡಿಕೊಂಡು ಮುಂದಿನ ನಿರ್ಧಾರ ತೆಗೆದು ಕೊಳ್ಳಲಾಗುವುದು ಎಂದು ಲ್ಯಾಂಗರ್ ತಿಳಿಸಿದ್ದಾರೆ.