ಮಾರ್ಷ್ ಕಳೆದೆರಡು ವರ್ಷಗಳಿಂದ ರೈಸಿಂಗ್ ಪುಣೆ ಸೂಪರ್'ಜೈಂಟ್ಸ್ ತಂಡದ ಆಟಗಾರರಾಗಿದ್ದ ಮಿಚೆಲ್ ಮಾರ್ಷ್, ಕಳೆದ ಆವೃತ್ತಿಯಲ್ಲಿ ಗಾಯದ ಸಮಸ್ಯೆಯಿಂದಾಗಿ ಐಪಿಎಲ್ ಟೂರ್ನಿಯಿಂದ ಹೊರಗುಳಿದಿದ್ದರು.

ಸಿಡ್ನಿ(ಅ.21): 2018ರ ಐಪಿಎಲ್‌'ನಿಂದ ಆಸ್ಟ್ರೇಲಿಯಾದ ಆಲ್ರೌಂಡರ್ ಮಿಚೆಲ್ ಮಾರ್ಷ್ ದೂರ ಉಳಿಯಲು ನಿರ್ಧರಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

2018ರ ಋತುವನ್ನು ಸಂಪೂರ್ಣವಾಗಿ ಇಂಗ್ಲೆಂಡ್ ಕೌಂಟಿ ಕ್ರಿಕೆಟ್ ಆಡಿ ಕಳೆಯಲು ಮಾರ್ಷ್ ನಿರ್ಧರಿಸಿದ್ದಾರೆ. ಇಂಗ್ಲೆಂಡ್‌'ನ ಸರ್ರೆ ತಂಡದೊಂದಿಗೆ ಆಡುವುದಾಗಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಐಪಿಎಲ್ ವೇಳೆ ಗಾಯದ ಸಮಸ್ಯೆಗೆ ತುತ್ತಾಗಿದ್ದ ಮಾರ್ಷ್, ಅಂರರಾಷ್ಟ್ರೀಯ ಕ್ರಿಕೆಟ್'ನಿಂದಲೂ ದೂರ ಉಳಿಯುವ ಪರಿಸ್ಥಿತಿಗೆ ಸಿಲುಕಿದ್ದರು.

ಮಾರ್ಷ್ ಕಳೆದೆರಡು ವರ್ಷಗಳಿಂದ ರೈಸಿಂಗ್ ಪುಣೆ ಸೂಪರ್'ಜೈಂಟ್ಸ್ ತಂಡದ ಆಟಗಾರರಾಗಿದ್ದ ಮಿಚೆಲ್ ಮಾರ್ಷ್, ಕಳೆದ ಆವೃತ್ತಿಯಲ್ಲಿ ಗಾಯದ ಸಮಸ್ಯೆಯಿಂದಾಗಿ ಐಪಿಎಲ್ ಟೂರ್ನಿಯಿಂದ ಹೊರಗುಳಿದಿದ್ದರು. ಮಾರ್ಷ್ ವೆಸ್ಟ್ರನ್ ಆಸ್ಟ್ರೇಲಿಯಾ ತಂಡವನ್ನೂ ಪ್ರತಿನಿಧಿಸುತ್ತಿದ್ದಾರೆ.