Asianet Suvarna News Asianet Suvarna News

ಕೆರಿಬಿಯನ್ ಪ್ರವಾಸ: ಪಾಕ್ ತಂಡವನ್ನು ಮುಂದುವರೆಸಲಿರುವ ಮಿಸ್ಬಾ

ಮಿಸ್ಬಾ-ಉಲ್-ಹಕ್ 74 ಟೆಸ್ಟ್ ಪಂದ್ಯಗಳನ್ನಾಡಿದ್ದು 53 ಬಾರಿ ಪಾಕಿಸ್ತಾನ ತಂಡವನ್ನು ಮುಂದುವರೆಸಿದ್ದಾರೆ. ಅದಲ್ಲಿ 24 ಪಂದ್ಯಗಳನ್ನು ಗೆದ್ದಿದ್ದರೆ, 18 ಪಂದ್ಯಗಳಲ್ಲಿ ಪಾಕಿಸ್ತಾನ ತಂಡ ಸೋತಿದೆ. ಇನ್ನು 11 ಪಂದ್ಯಗಳು ಡ್ರಾ ಕಂಡಿವೆ.

Misbah ul Haq to lead Pakistan in Tests on Caribbean tour confirms PCB

ಕರಾಚಿ(ಮಾ.06): ಮುಂದಿನ ತಿಂಗಳಿನಲ್ಲಿ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿರುವ ಪಾಕಿಸ್ತಾನ ಟೆಸ್ಟ್ ತಂಡವನ್ನು ಮಿಸ್ಬಾ-ಉಲ್-ಹಕ್ ಮುನ್ನೆಡೆಸಲಿದ್ದಾರೆಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸ್ಪಷ್ಟಪಡಿಸಿದೆ.

ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ವಿರುದ್ಧ ವೈಟ್'ವಾಷ್ ಅನುಭವಿಸಿದ ಬೆನ್ನಲ್ಲೇ ಮಿಸ್ಬಾ ಅವರನ್ನು ನಾಯಕತ್ವದ ಕೆಳಗಿಳಿಸಬೇಕೆಂದು ಹಿರಿಯ ಕ್ರಿಕೆಟಿಗರು ಆಗ್ರಹಿಸಿದ್ದರು.

ಮಿಸ್ಬಾ ಆಯ್ಕೆಯನ್ನು ಖಚಿತಪಡಿಸಿರುವ ಪಿಸಿಬಿ ಅಧ್ಯಕ್ಷ ಶಹರ್ಯಾರ್ ಖಾನ್, ವೆಸ್ಟ್'ಇಂಡೀಸ್ ಸರಣಿಗೆ ತಾವು ಲಭ್ಯವಿರುವುದಾಗಿ ಮಿಸ್ಬಾ ತಿಳಿಸಿದ್ದರು. ಆಯ್ಕೆ ಸಮಿತಿ ಚರ್ಚಿಸಿ ಮಿಸ್ಬಾ ಅವರನ್ನೇ ನಾಯಕರನ್ನಾಗಿ ಮುಂದುವರಿಸಲು ತೀರ್ಮಾನಿಸಲಾಯಿತು ಎಂದಿದ್ದಾರೆ.

ಮೂರು ಪಂದ್ಯಗಳ ಟೆಸ್ಟ್ ಸರಣಿಯು ಏಪ್ರಿಲ್ 22ರಿಂದ ಬಾರ್ಬಡೋಸ್'ನಲ್ಲಿ ಆರಂಭವಾಗಲಿದೆ.

ಪಾಕಿಸ್ತಾನ ಕಂಡ ಅತ್ಯಂತ ಯಶಸ್ವಿ ನಾಯಕ ಎನ್ನುವ ಕೀರ್ತಿಗೆ ಭಾಜನರಾಗಿರುವ ಮಿಸ್ಬಾ-ಉಲ್-ಹಕ್ 74 ಟೆಸ್ಟ್ ಪಂದ್ಯಗಳನ್ನಾಡಿದ್ದು 53 ಬಾರಿ ಪಾಕಿಸ್ತಾನ ತಂಡವನ್ನು ಮುಂದುವರೆಸಿದ್ದಾರೆ. ಅದಲ್ಲಿ 24 ಪಂದ್ಯಗಳನ್ನು ಗೆದ್ದಿದ್ದರೆ, 18 ಪಂದ್ಯಗಳಲ್ಲಿ ಪಾಕಿಸ್ತಾನ ತಂಡ ಸೋತಿದೆ. ಇನ್ನು 11 ಪಂದ್ಯಗಳು ಡ್ರಾ ಕಂಡಿವೆ.

Follow Us:
Download App:
  • android
  • ios