43 ವರ್ಷದ ಮಿಸ್ಬಾ ಒಂದೇ ಓವರ್'ನಲ್ಲಿ ಆರು ಸಿಕ್ಸರ್ ಸಿಡಿಸಿಲ್ಲ, ಬದಲಾಗಿ 19ನೇ ಓವರ್'ನ ಅಂತಿಮ ಎರಡು ಎಸೆತಗಳಲ್ಲಿ ಮತ್ತು 20ನೇ ಓವರ್'ನಲ್ಲಿ ಸತತ ನಾಲ್ಕು ಸಿಕ್ಸರ್ ಸಿಡಿಸಿ ದಾಖಲೆ ಬರೆದರು.

ನವದೆಹಲಿ(ಮಾ.09): ಕ್ರಿಕೆಟ್ ವೃತ್ತಿಜೀವನದ ಸಂಧ್ಯಾಕಾಲದಲ್ಲಿರುವ ಪಾಕಿಸ್ತಾನ ಟೆಸ್ಟ್ ತಂಡದ ನಾಯಕ ಮಿಸ್ಬಾ-ಉಲ್-ಹಕ್ ತನ್ನಲ್ಲಿ ಇನ್ನೂ ಸ್ಫೋಟಕ ಬ್ಯಾಟಿಂಗ್ ನಡೆಸುವ ಸಾಮರ್ಥ್ಯವಿದೆ ಎನ್ನುವುದನ್ನು ಸಾಭೀತುಪಡಿಸಿದ್ದಾರೆ.

Add Asianetnews Kannada as a Preferred SourcegooglePreferred

ಹಾಂಗ್'ಕಾಂಗ್ ಟಿ20 ಬ್ಲಿಟ್ಜ್ ಟೂರ್ನಿಯಲ್ಲಿ ಹಾಂಗ್'ಕಾಂಗ್ ಐಸ್'ಲ್ಯಾಂಡ್ ಯುನೈಟೆಡ್ ತಂಡವನ್ನು ಪ್ರತಿನಿಧಿಸುತ್ತಿರುವ ಮಿಸ್ಬಾ, ಹಂಗ್ ಹೋಂ ಜಾಗ್ವಾರ್ ವಿರುದ್ಧದ ಪಂದ್ಯದಲ್ಲಿ ಆರು ಎಸೆತದಲ್ಲಿ ಆರು ಸಿಕ್ಸರ್ ಸಿಡಿಸಿ ದಾಖಲೆ ಬರೆದಿದ್ದಾರೆ.

43 ವರ್ಷದ ಮಿಸ್ಬಾ ಒಂದೇ ಓವರ್'ನಲ್ಲಿ ಆರು ಸಿಕ್ಸರ್ ಸಿಡಿಸಿಲ್ಲ, ಬದಲಾಗಿ 19ನೇ ಓವರ್'ನ ಅಂತಿಮ ಎರಡು ಎಸೆತಗಳಲ್ಲಿ ಮತ್ತು 20ನೇ ಓವರ್'ನಲ್ಲಿ ಸತತ ನಾಲ್ಕು ಸಿಕ್ಸರ್ ಸಿಡಿಸಿ ದಾಖಲೆ ಬರೆದರು. ಆದರೂ ಯುವರಾಜ್ ಸಿಂಗ್ ದಾಖಲೆ ಮುರಿಯಲು ವಿಫಲರಾದರು. ಯುವರಾಜ್ ಸಿಂಗ್ 2007ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ಧ ಸ್ಟುವರ್ಟ್ ಬ್ರಾಂಡ್ ಓವರ್'ನಲ್ಲಿ ಆರು ಎಸೆತದಲ್ಲಿ ಆರು ಸಿಕ್ಸರ್ ಸಿಡಿಸಿ ದಾಖಲೆ 

ಮಿಸ್ಬಾ ಅವರ ಸ್ಫೋಟಕ 82 ರನ್'ಗಳ ನೆರವಿನಿಂದ ಹಾಂಗ್'ಕಾಂಗ್ ಐಸ್'ಲ್ಯಾಂಡ್ ಯುನೈಟೆಡ್ 20 ಓವರ್'ಗಳಲ್ಲಿ 6 ವಿಕೆಟ್ ನಷ್ಟಕ್ಕೆ 216 ರನ್ ಕಲೆಹಾಕಿತು. ಇದಕ್ಕೆ ಪ್ರತ್ಯುತ್ತರವಾಗಿ ಹಂಗ್ ಹೋಂ ಜಾಗ್ವಾರ್ ತಂಡ 8 ವಿಕೆಟ್ ಕಳೆದುಕೊಂಡು 183 ರನ್'ಗಳಿಸಲಷ್ಟೇ ಶಕ್ತವಾಯಿತು.

ಹೀಗಿತ್ತು ಮಿಸ್ಬಾ ಉಲ್ ಹಕ್ ಸಿಡಿಸಿದ ಆರು ಸಿಕ್ಸರ್'ಗಳು...