ಪ್ಯಾರೀಸ್(ಫೆ.18): ಲಂಡನ್ ಒಲಿಂಪಿಕ್ಸ್ ನಂತರ ವೃತ್ತಿಬದುಕಿಗೆ ನಿವೃತ್ತಿ ಹೇಳಿದರೂ, ರಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿ ಐದು ಪದಕ ಜಯಿಸಿ ವಿಶ್ವ ಅಥ್ಲೀಟ್‌'ಗಳಲ್ಲಿ ಅಸೂಯೆ ಮೂಡಿಸಿದ ಜಗದ್ವಿಖ್ಯಾತ ಸ್ವಿಮ್ಮರ್ ಮೈಕೆಲ್ ಫೆಲ್ಫ್ಸ್ ಇದೀಗ 2020ರ ಟೋಕಿಯೊ ಒಲಿಂಪಿಕ್ಸ್‌'ಗೂ ಹಾಜರಿರುವುದಾಗಿ ಹೇಳಿ ಅಚ್ಚರಿ ಮೂಡಿಸಿದ್ದಾರೆ!

ಆದರೆ, ಈ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅವರು ತನ್ನದೇ ಈಜುಡುಗೆಯ ಮಾರಾಟಗಾರನಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ! ನನ್ನ ಹೋರಾಟ ಮುಗಿಸಿದ್ದೇನೆ. ಆದರೆ ಹೊಸ ಈಜುಡುಗೆಯೊಂದಿಗೆ ಟೋಕಿಯೊದಲ್ಲಿ ಹಾಜಲಿರಲಿದ್ದೇನೆ ಎಂದು 31 ವರ್ಷದ ಫೆಲ್ಫ್ಸ್ ಹೇಳಿದ್ದಾರೆ.

28 ಒಲಿಂಪಿಕ್ ಪದಕಗಳ ಒಡೆಯನ ಈ ಮಾತು ಕೇಳಿ ಮಿಕ್ಕ ಈಜುಗಾರರು ನಿಟ್ಟುಸಿರು ಬಿಟ್ಟಿದ್ದಾರೆ..!

ಇದೇವೇಳೆ ಅಮೆರಿಕಾ ನನ್ನ ದೇಶ, ಹಾಗಾಗಿ 2024ರ ಲಾಸ್ ವೇಗಾಸ್'ನಲ್ಲಿ ನಡೆಯಲಿರುವ ಒಲಂಪಿಕ್ಸನ್ನು ನಾನು ಬೆಂಬಲಿಸುತ್ತೇನೆ ಎಂದು ಚಿನ್ನದ ಮೀನು ಎಂದೇ ಕರೆಸಿಕೊಳ್ಳುವ ಮೈಕಲ್ ಫೆಲ್ಫ್ಸ್ ಹೇಳಿದ್ದಾರೆ.