ಮಿಯಾಮಿ(ಮಾ.20): ಉತ್ತಮ ಲಯದಲ್ಲಿರುವ ಭಾರತದ ಅಗ್ರ ಟೆನಿಸ್‌ ಆಟಗಾರ ಪ್ರಜ್ನೇಶ್‌ ಗುಣೇಶ್ವರನ್‌, ಮಿಯಾಮಿ ಮಾಸ್ಟ​ರ್ಸ್ ಅರ್ಹತಾ ಹಂತದ ಅಂತಿಮ ಸುತ್ತಿಗೇರಿದ್ದಾರೆ. ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ಪ್ರಜ್ನೇಶ್‌, ಸ್ಪೇನ್‌ನ ಏಡ್ರಿಯಾನ್‌ ಮೆನೆಂಡೆಜ್‌ ವಿರುದ್ಧ 6-2, 6-4 ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು.

ಇದನ್ನೂ ಓದಿ: ಇಂಡೋ-ಪಾಕ್ ಟೆನ್ಶನ್: ಭಾರತದಿಂದ ಟೆನಿಸ್‌ ಟೂರ್ನಿಗಳು ಸ್ಥಳಾಂತರ!

 ಪ್ರಧಾನ ಸುತ್ತಿಗೇರಲು ಪ್ರಜ್ನೇಶ್‌, ಬ್ರಿಟನ್‌ನ ಜೇ ಕ್ಲಾರ್ಕ್ ವಿರುದ್ಧ ಗೆಲ್ಲಬೇಕಿದೆ. ಇದೇ ವೇಳೆ ಭಾರತದ ಮತ್ತೊಬ್ಬ ಆಟಗಾರ ರಾಮ್‌ಕುಮಾರ್‌ ರಾಮನಾಥನ್‌ ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ಇಟಲಿಯ ಲೊರೆನ್ಜೊ ಸೆನೆಗೊ ವಿರುದ್ಧ 4-6, 1-6 ಸೆಟ್‌ಗಳಲ್ಲಿ ಪರಾಭವಗೊಂಡು ಹೊರಬಿದ್ದರು. ಪುರುಷರ ಡಬಲ್ಸ್‌ ಪ್ರಧಾನ ಸುತ್ತಿನಲ್ಲಿ ರೋಹನ್‌ ಬೋಪಣ್ಣ ಕೆನಡಾದ ಡೆನಿಸ್‌ ಶಾಪೊವಲೋವ್‌ ಜತೆ ಕಣಕ್ಕಿಳಿಯಲಿದ್ದಾರೆ.