Asianet Suvarna News Asianet Suvarna News

ಇಂಡೋ-ಪಾಕ್ ಟೆನ್ಶನ್: ಭಾರತದಿಂದ ಟೆನಿಸ್‌ ಟೂರ್ನಿಗಳು ಸ್ಥಳಾಂತರ!

ಪುಲ್ವಾಮಾ ದಾಳಿ ಬಳಿಕ ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಬಂಧ ಮತ್ತಷ್ಟು ಹದಗೆಟ್ಟಿದೆ. ಹೀಗಾಗಿ ಭಾರತದಲ್ಲಿ ನಡೆಯಬೇಕಿದ್ದ ಡೇವಿಸ್ ಕಪ್ ಹಾಗೂ ಫೆಡ್ ಕಪ್ ಆತಿಥ್ಯ ಇದೀಗ ಬೇರೆಡೆಗೆ ಸ್ಥಳಾಂತರಗೊಂಡಿದೆ.

India Lose davis cup fed cup hosting rights after Pulwama attack revenge
Author
Bengaluru, First Published Mar 20, 2019, 9:19 AM IST

ನವದೆಹಲಿ(ಮಾ.20): ಬಾಲಾಕೋಟ್‌ ವಾಯು ದಾಳಿ ಬಳಿಕ ಪಾಕಿಸ್ತಾನ ವಾಯು ಪ್ರದೇಶ ಬಂದ್‌ ಆಗಿರುವ ಹಿನ್ನೆಲೆಯಲ್ಲಿ, ಭಾರತ ಕಿರಿಯರ ಡೇವಿಸ್‌ ಕಪ್‌ ಹಾಗೂ ಫೆಡ್‌ ಕಪ್‌ ಆತಿಥ್ಯವನ್ನು ಕಳೆದುಕೊಂಡಿದೆ. ಪಾಕಿಸ್ತಾನ ಸೇರಿ 16 ಅಂಡರ್‌-16 ಡೇವಿಸ್‌ ಕಪ್‌ ತಂಡಗಳು ಭಾರತಕ್ಕೆ ಆಗಮಿಸಬೇಕಿತ್ತು. ಟೂರ್ನಿ ಏ.8-13ರ ವರೆಗೂ ನಿಗದಿಯಾಗಿತ್ತು. ಫೆಡ್‌ ಕಪ್‌ ಪಂದ್ಯಗಳು ಏ.15-20ರ ವರೆಗೂ ನಡೆಯಬೇಕಿತ್ತು.

ಇದನ್ನೂ ಓದಿ: ಬೆಂಗಳೂರು ಚಾಂಪಿಯನ್ಸ್ ತಂಡಗಳಿಗೆ ಕ್ರೀಡಾಂಗಣ ಸಮಸ್ಯೆ

‘ಪಾಕಿಸ್ತಾನ ವಾಯು ಪ್ರದೇಶ ಬಂದ್‌ ಆಗಿರುವ ಕಾರಣ, ಭಾರತ ತಲುಪಲು ಹಲವು ತಂಡಗಳು ಪರ್ಯಾಯ ಮಾರ್ಗ ಆಯ್ಕೆ ಮಾಡಿಕೊಳ್ಳಬೇಕಿದೆ. ಇದರಿಂದಾಗಿ ಪ್ರಯಾಣ ವೆಚ್ಚ, ಸಮಯ ಹೆಚ್ಚಾಗಲಿದೆ. ಹೀಗಾಗಿ ಟೂರ್ನಿಯನ್ನು ಬ್ಯಾಂಕಾಕ್‌ನಲ್ಲಿ ನಡೆಸಲು ನಿರ್ಧರಿಸಲಾಗಿದೆ’ ಎಂದು ಅಂತಾರಾಷ್ಟ್ರೀಯ ಟೆನಿಸ್‌ ಫೆಡರೇಷನ್‌(ಐಟಿಎಫ್‌) ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಇದನ್ನೂ ಓದಿ: ಅಂಡರ್ 17 ಫಿಫಾ ಮಹಿಳಾ ವಿಶ್ವಕಪ್ ಆತಿಥ್ಯ ಭಾರತದ ತೆಕ್ಕೆಗೆ

ಈ ಬೆಳವಣಿಗೆ ಕುರಿತು ಅಖಿಲ ಭಾರತ ಟೆನಿಸ್‌ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಹಿರನ್ಮೋಯ್‌ ಚಟರ್ಜಿ ಮಾನತಾಡಿದ್ದು, ‘ಟೂರ್ನಿಯಲ್ಲಿ ಪಾಲ್ಗೊಳ್ಳುವ ತಂಡಗಳಿಗೆ ಊಟ, ವಸತಿ, ಪ್ರಯಾಣ ವೆಚ್ಚವನ್ನು ನಾವೇ ಭರಿಸಬೇಕಿದೆ. ಸಂಸ್ಥೆ ಆರ್ಥಿಕ ಸಂಕಷ್ಟದಲ್ಲಿದೆ. ಸರ್ಕಾರದಿಂದಲೂ ಯಾವುದೇ ನೆರವು ಸಿಗುತ್ತಿಲ್ಲ. ಹೀಗಾಗಿ ಟೂರ್ನಿ ಆಯೋಜಿಸಲು ಸಾಧ್ಯವಿಲ್ಲ ಎಂದು ಐಟಿಎಫ್‌ಗೆ ಮನವರಿಕೆ ಮಾಡಿಕೊಟ್ಟೆವು’ ಎಂದು ಹೇಳಿದ್ದಾರೆ.
 

Follow Us:
Download App:
  • android
  • ios