ಹೈದರಾಬಾದ್‌ ತಾನಾಡಿದ ಮೊದಲ ಎರಡು ಪಂದ್ಯಗಳನ್ನು ಗೆದ್ದಿತ್ತು. ಈ ಮೂಲಕ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿತ್ತು. ಇದೀಗ ಮೊದಲ ಸೋಲು ಕಾಣುವ ಮೂಲಕ ಹೈದರಾಬಾದ್‌ ತಂಡ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.
ಮುಂಬೈ(ಏ.13): ಮಧ್ಯಮ ಕ್ರಮಾಂಕದಲ್ಲಿ ನಿತೀಶ್ ರಾಣಾ (45: 36 ಎಸೆತ, 3 ಬೌಂಡರಿ, 2 ಸಿಕ್ಸರ್) ಮತ್ತು ಕೃಣಾಲ್ ಪಾಂಡ್ಯ (37: 20 ಎಸೆತ, 3 ಬೌಂಡರಿ. 3 ಸಿಕ್ಸರ್) ಅವರ ಭರ್ಜರಿ ಬ್ಯಾಟಿಂಗ್ ಮತ್ತು ವೇಗಿ ಜಸ್ಟ್ರೀತ್ ಬುಮ್ರಾ (24ಕ್ಕೆ 3) ವಿಕೆಟ್ ಪಡೆದ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡ, ಐಪಿಎಲ್ 10ನೇ ಆವೃತ್ತಿಯ ಹತ್ತನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 4 ವಿಕೆಟ್ಗಳ ಅಂತರದಲ್ಲಿ ಗೆಲುವು ದಾಖಲಿಸಿದೆ. ಇದರೊಂದಿಗೆ ಸನ್ರೈಸರ್ಸ್ ಹೈದರಾಬಾದ್ ತಂಡದ ಹ್ಯಾಟ್ರಿಕ್ ಗೆಲುವಿನ ಕನಸನ್ನು ಮಾಜಿ ಚಾಂಪಿಯನ್ ಮುಂಬೈ ತಂಡ ಭಗ್ನಗೊಳಿಸಿದೆ.
ಹೈದರಾಬಾದ್ ತಾನಾಡಿದ ಮೊದಲ ಎರಡು ಪಂದ್ಯಗಳನ್ನು ಗೆದ್ದಿತ್ತು. ಈ ಮೂಲಕ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿತ್ತು. ಇದೀಗ ಮೊದಲ ಸೋಲು ಕಾಣುವ ಮೂಲಕ ಹೈದರಾಬಾದ್ ತಂಡ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.
ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ತಂಡ 20 ಓವರ್ಗಳಲ್ಲಿ 8 ವಿಕೆಟ್ಗೆ 158 ರನ್ ಗಳಿಸಿತು. ನಂತರ ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ 18.4 ಓವರ್ಗಳಲ್ಲಿ 6 ವಿಕೆಟ್ಗೆ 159ರನ್ಗಳಿಸಿತು. ಸವಾಲಿನ ಗುರಿ ಬೆನ್ನಟ್ಟಿದ ಮುಂಬೈ ತಂಡ ಆರಂಭಿಕ ಪಾರ್ಥೀವ್ ಪಟೇಲ್ (39), ಜಾಸ್ ಬಟ್ಲರ್ (14) ರನ್ಗಳಿಸಿ ಮೊದಲ ವಿಕೆಟ್ಗೆ 28 ರನ್ಗಳ ಜತೆಯಾಟ ನಿರ್ವಹಿಸಿದರು. ನಾಯಕ ರೋಹಿತ್ ಶರ್ಮ (4) ನಿರಾಸೆ ಮೂಡಿಸಿದರು. 79 ರನ್ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ಮುಂಬೈ ತಂಡಕ್ಕೆ ನಿತೀಶ್ ರಾಣಾ, ಕೃಣಾಲ್ ಪಾಂಡ್ಯ ವೇಗದ ಬ್ಯಾಟಿಂಗ್ ಮೂಲಕ ಆಸರೆಯಾದರು.
ಹೈದರಾಬಾದ್ ಪರ ಭುವನೇಶ್ವರ್ ಕುಮಾರ್ 3, ಆಶೀಶ್ ನೆಹ್ರಾ, ರಶೀದ್ ಖಾನ್ ಮತ್ತು ದೀಪಕ್ ಹೂಡಾ ತಲಾ 1 ವಿಕೆಟ್ ಪಡೆದರು. ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಹೈದರಾಬಾದ್ ಬ್ಯಾಟ್ಸ್ಮನ್ಗಳ ಪೈಕಿ ಆರಂಭಿಕರಾದ ಡೇವಿಡ್ ವಾರ್ನರ್ (49) ಮತ್ತು ಶಿಖರ್ ಧವನ್ (48) ರನ್ ಗಳಿಸಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಬೆನ್ ಕಟ್ಟಿಂಗ್ (20) ರನ್ಗಳಿಸಿದ್ದೂ ಬಿಟ್ಟರೇ ಉಳಿದ ಬ್ಯಾಟ್ಸ್ಮನ್ಗಳು ಒಂದಂಕಿ ಮೊತ್ತ ದಾಟಲಿಲ್ಲ. ಇನ್ನು ಹೈದರಾಬಾದ್ ಪರ ಆರಂಭಿಕರಾದ ಧವನ್ ಮತ್ತು ವಾರ್ನರ್ ಮೊದಲ ವಿಕೆಟ್ಗೆ 10.2 ಓವರ್ಗಳಲ್ಲಿ 81 ರನ್ಗಳ ಜತೆಯಾಟ ನಿರ್ವಹಿಸಿದರು. ಮುಂಬೈ ಪರ ಹರ್ಭಜನ್ 2, ಮಾಲಿಂಗ, ಹಾರ್ದಿಕ್ ಮತ್ತು ಮೆಕ್ಲನಘನ್ 1 ವಿಕೆಟ್ ಪಡೆದರು.
ಸ್ಕೋರ್ ವಿವರ
ಸನ್ ರೈಸರ್ಸ್ ಹೈದರಾಬಾದ್ 20 ಓವರ್ಗಳಲ್ಲಿ 158/8
ಶಿಖರ್ ಧವನ್ ಬಿ ಮೆಕ್ಲೆನಘನ್ 48
ವಾರ್ನರ್ ಸಿ ಪಾರ್ಥೀವ್ ಬಿ ಹರ್ಭಜನ್ 49
ಹೂಡಾ ಸಿ ಪೊಲಾರ್ಡ್ ಬಿ ಹರ್ಭಜನ್ 09
ಯುವರಾಜ್ ಸಿಂಗ್ ಬಿ ಹಾರ್ದಿಕ್ 05
ಬೆನ್ ಕಟಿಂಗ್ ಬಿ ಬುಮ್ರಾ 20
ನಮಾನ್ ಓಜಾ ಸಿ ಪೊಲಾರ್ಡ್ ಬಿ ಬುಮ್ರಾ 09
ವಿಜಯ್ ಶಂಕರ್ ಸಿ ರಾಣಾ ಬಿ ಮಾಲಿಂಗ 01
ರಶೀದ್ ಖಾನ್ ಸಿ ಮತ್ತು ಬಿ ಬುಮ್ರಾ 02
ಭುವನೇಶ್ವರ್ ಕುಮಾರ್ ಅಜೇಯ 04
ಆಶೀಶ್ ನೆಹ್ರಾ ಅಜೇಯ 00
ಇತರೆ: (ಲೆಬೈ 5, ವೈ 5, ನೋಬಾಲ್ 1) 11
ವಿಕೆಟ್ ಪತನ: 1-81 (ವಾರ್ನರ್), 2-105 (ಹೂಡಾ), 3-114 (ಧವನ್), 4-123 (ಯುವರಾಜ್), 5-146 (ಕಟಿಂಗ್), 6-147 (ಶಂಕರ್), 7-153 (ಓಜಾ), 8-155 (ರಶೀದ್ ಖಾನ್)
ಬೌಲಿಂಗ್: ಹರ್ಭಜನ್ ಸಿಂಗ್ 4-0-23-2, ಲಸಿತ್ ಮಾಲಿಂಗ 4-0-30-1, ಜಸ್ಟ್ರೀತ್ ಬುಮ್ರಾ 4-0-24-3, ಮೆಕ್ಲೆನಘನ್ 4-0-42-1, ಹಾರ್ದಿಕ್ ಪಾಂಡ್ಯ 3-0-22-1, ಕೃಣಾಲ್ ಪಾಂಡ್ಯ 1-0-12-0
ಮುಂಬೈ ಇಂಡಿಯನ್ಸ್ 18.4 ಓವರ್ಗಳಲ್ಲಿ 6 ವಿಕೆಟ್ಗೆ 159
ಪಾರ್ಥೀವ್ ಸಿ ಭುವನೇಶ್ವರ್ ಬಿ ಹೂಡಾ 39
ಜಾಸ್ ಬಟ್ಲರ್ ಬಿ ನೆಹ್ರಾ 14
ರೋಹಿತ್ ಎಲ್ಬಿಡಬ್ಲ್ಯೂ ಬಿ ರಶೀದ್ ಖಾನ್ 04
ನಿತೀಶ್ ರಾಣಾ ಬಿ ಭುವನೇಶ್ವರ್ 45
ಪೋಲಾರ್ಡ್ ಸಿ ಧವನ್ ಬಿ ಭುವನೇಶ್ವರ್ 11
ಕೃಣಾಲ್ ಪಾಂಡ್ಯ ಸಿ ಕಟಿಂಗ್ ಬಿ ಭುವನೇಶ್ವರ್ 37
ಹಾರ್ದಿಕ್ ಪಾಂಡ್ಯ ಅಜೇಯ 02
ಹರ್ಭಜನ್ ಸಿಂಗ್ ಅಜೇಯ 03
ಇತರೆ: (ಲೆಬೈ 3, ವೈ 1)
ವಿಕೆಟ್ ಪತನ: 1-28 (ಬಟ್ಲರ್), 2-41 (ಶರ್ಮ), 3-79 (ಪಾರ್ಥೀವ್), 4-111 (ಪೋಲಾರ್ಡ್), 5-149 (ಕೃಣಾಲ್), 6-155 (ರಾಣಾ)
ಬೌಲಿಂಗ್: ಭುವನೇಶ್ವರ್ ಕುಮಾರ್ 4-0-21-3, ಆಶೀಶ್ ನೆಹ್ರಾ 4-0-46-1, ರಶೀದ್ ಖಾನ್ 4-0-19-1, ಮುಸ್ತಾಫಿಜುರ್ ರಹಮಾನ್ 2.4-0-34-0, ದೀಪಕ್ ಹೂಡಾ 2-0-18-1, ಬೆನ್ ಕಟಿಂಗ್ 2-0-18-0
ಪಂದ್ಯಶ್ರೇಷ್ಠ: ಜಸ್ಟ್ರೀತ್ ಬುಮ್ರಾ (ಮುಂಬೈ ಇಂಡಿಯನ್ಸ್)
