Asianet Suvarna News Asianet Suvarna News

ಮೆಲ್ಬರ್ನ್ ಟೆಸ್ಟ್: ಬುಮ್ರಾ ದಾಳಿಗೆ ತತ್ತರಿಸಿದ ಆಸಿಸ್ 151 ರನ್’ಗಳಿಗೆ ಆಲೌಟ್

ಮೊದಲ ಇನ್ನಿಂಗ್ಸ್’ನಲ್ಲಿ ಟೀಂ ಇಂಡಿಯಾ 443 ರನ್ ಬಾರಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಮೂರನೇ ದಿನ 8 ರನ್’ಗಳೊಂದಿಗೆ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ಭಾರತದ ದಾಳಿಗೆ ತತ್ತರಿಸಿ ಹೋಯಿತು. ತಂಡದ ಮೊತ್ತ 102 ರನ್’ಗಳಾಗುವಷ್ಟರಲ್ಲಿ ಪ್ರಮುಖ 6 ಬ್ಯಾಟ್ಸ್’ಮನ್’ಗಳು ಪೆವಿಲಿಯನ್ ಸೇರಿದ್ದರು.

Melbourne Test Bumrah picks 6 wickets Australia 151 all out
Author
Melbourne VIC, First Published Dec 28, 2018, 10:42 AM IST

ಮೆಲ್ಬರ್ನ್[ಡಿ.28]: ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ(6 ವಿಕೆಟ್) ಮಾರಕ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ ಕೇವಲ 151 ರನ್’ಗಳಿಗೆ ಸರ್ವಪತನ ಕಂಡಿದೆ. ಈ ಮೂಲಕ ಮೊದಲ ಇನ್ನಿಂಗ್ಸ್’ನಲ್ಲಿ ಭಾರತ 292 ರನ್’ಗಳ ಬೃಹತ್ ಮುನ್ನಡೆ ಸಾಧಿಸಿದೆ. 

ಮೊದಲ ಇನ್ನಿಂಗ್ಸ್’ನಲ್ಲಿ ಟೀಂ ಇಂಡಿಯಾ 443 ರನ್ ಬಾರಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಮೂರನೇ ದಿನ 8 ರನ್’ಗಳೊಂದಿಗೆ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ಭಾರತದ ದಾಳಿಗೆ ತತ್ತರಿಸಿ ಹೋಯಿತು. ತಂಡದ ಮೊತ್ತ 102 ರನ್’ಗಳಾಗುವಷ್ಟರಲ್ಲಿ ಪ್ರಮುಖ 6 ಬ್ಯಾಟ್ಸ್’ಮನ್’ಗಳು ಪೆವಿಲಿಯನ್ ಸೇರಿದ್ದರು. ಈ ವೇಳೆ 7ನೇ ವಿಕೆಟ್’ಗೆ ಜತೆಯಾದ ನಾಯಕ ಪೈನೆ ಹಾಗೂ ಪ್ಯಾಟ್ ಕಮ್ಮಿನ್ಸ್ 36 ರನ್’ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಗಲು ಪ್ರಯತ್ನಿಸಿತು. ಆದರೆ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಮೊಹಮ್ಮದ್ ಶಮಿ ಯಶಸ್ವಿಯಾದರು. ಆ ಬಳಿಕ ಕೊನೆಯ 2 ವಿಕೆಟ್ ಕಬಳಿಸುವಲ್ಲಿ ಬುಮ್ರಾ ಯಶಸ್ವಿಯಾದರು.

ಮಿಂಚಿದ ಬುಮ್ರಾ: ಟೀಂ ಇಂಡಿಯಾ ಪರ ಶಿಸ್ತಿನ ದಾಳಿ ನಡೆಸಿದ ಬುಮ್ರಾ ಆಸಿಸ್’ನ 6 ವಿಕೆಟ್ ಕಬಳಿಸುವ ಮೂಲಕ ಆಘಾತ ನೀಡಿದರು. ಆರಂಭಿಕ ಹ್ಯಾರಿಸ್ ವಿಕೆಟ್ ಕಬಳಿಸಿದ ಬುಮ್ರಾ ನಂತರ ಪದೇ-ಪದೇ ಆಸಿಸ್’ಗೆ ಶಾಕ್ ನೀಡುತ್ತಲೇ ಸಾಗಿದರು. ಶಾನ್ ಮಾರ್ಷ್, ಟ್ರಾವಿಸ್ ಹೆಡ್, ಟಿಮ್ ಪೈನೆ ಸೇರಿದಂತೆ ಪ್ರಮುಖ 6 ವಿಕೆಟ್ ಕಬಳಿಸಿ ಮಿಂಚಿದರು. ಇದರೊಂದಿಗೆ ಕ್ಯಾಲೆಂಡರ್ ವರ್ಷದಲ್ಲೇ ಆಸ್ಟ್ರೇಲಿಯಾ,

ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ನೆಲದಲ್ಲಿ 5+ ವಿಕೆಟ್ ಕಬಳಿಸಿದ ಏಷ್ಯಾದ ಮೊದಲ ಬೌಲರ್ ಎನ್ನುವ ಗೌರವಕ್ಕೆ ಜಸ್ಪ್ರೀತ್ ಬುಮ್ರಾ ಭಾಜನರಾಗಿದ್ದಾರೆ.  

ಸಂಕ್ಷಿಪ್ತ ಸ್ಕೋರ್:
ಭಾರತ: 443/7
ಪೂಜಾರ: 106
ಕಮ್ಮಿನ್ಸ್: 72/3
ಆಸ್ಟ್ರೇಲಿಯಾ: 151/10
ಹ್ಯಾರಿಸ್: 22
ಬುಮ್ರಾ: 33/6

Follow Us:
Download App:
  • android
  • ios