ನಿರ್ದಿಷ್ಟ ಸಮಯದಲ್ಲಿ ಬೌಲರ್‌ಗಳು ಮುಗಿಸಬೇಕು ಓವರ್!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 9, Aug 2018, 11:27 AM IST
MCC plan to introducing a shot clock to speed up cricket
Highlights

ಕಬಡ್ಡಿ, ಬಾಸ್ಕೆಟ್ ಬಾಲ್ ಸೇರಿದಂತೆ ಇತರ ಕ್ರೀಡೆಗಳಲ್ಲಿ ಪ್ರತಿ ರೈಡ್, ಪ್ರತಿ ಘಟಕ್ಕೂ ಸಮಯದ ಮಿತಿ ಇದೆ. ಇದೀಗ ಕ್ರಿಕೆಟ್‌ನಲ್ಲೂ ಹೊಸ ಸಮಯದ ಮಿತಿ ಜಾರಿಗೆ ತರಲು ಮುಂದಾಗಿದೆ. ಹೊಸ ರೂಲ್ಸ್‌ನಿಂದ ಬೌಲರ್‌ಗಳಿಗೆ ತಲೆನೋವು ಶುರುವಾಗಿದೆ.

ಲಂಡನ್(ಆ.09): ಕ್ರಿಕೆಟ್‌ನಲ್ಲಿ ಸದ್ಯದಲ್ಲೇ ಹಲವು ಬದಲಾವಣೆಗಳಾಗುವ ಸಾಧ್ಯತೆ ಇದೆ. ಕ್ರಿಕೆಟ್ ಆಟದ ನಿಯಮಗಳನ್ನು ಪರಿಷ್ಕರಿಸುವ ಮೆರಿಲ್ಬೋನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ಸಭೆಯಲ್ಲಿ ಪ್ರಮುಖವಾಗಿ ನಿಧಾನಗತಿಯ ಬೌಲಿಂಗ್ ಸಮಸ್ಯೆಗೆ ಪರಿಹಾರ ಹುಡುಕಲು ಸದಸ್ಯರು ಚರ್ಚೆ ನಡೆಸಿದರು.

ಎಂಸಿಸಿ ಸಮಿತಿ ಮಾಜಿ ಕ್ರಿಕೆಟಿಗರಾದ ಸೌರವ್ ಗಂಗೂಲಿ, ರಾಡ್ ಮಾರ್ಷ್, ಬ್ರೆಂಡನ್ ಮೆಕ್ಕಲಂ, ರಿಕಿ ಪಾಂಟಿಂಗ್ ಹಾಗೂ ಕುಮಾರ್ ಸಂಗಕ್ಕಾರರನ್ನು ಹೊಂದಿದೆ. ಈ ಸದಸ್ಯರು ನಡೆಸಿದ ಚರ್ಚೆ ವೇಳೆ, ಬೌಲರ್‌ಗಳಿಗೆ ಓವರ್ ಮುಕ್ತಾಯಗೊಳಿಸಲು ನಿರ್ದಿಷ್ಟ ಸಮಯವನ್ನು ನಿಗದಿ ಮಾಡಬೇಕು ಎನ್ನುವ ವಿಷಯ ಪ್ರಸ್ತಾಪವಾಯಿತು. 

ಕಳೆದ 12 ತಿಂಗಳ ಅಂಕಿ-ಅಂಶಗಳನ್ನು ತೆಗೆದು ನೋಡಿ ದಾಗ, ಟೆಸ್ಟ್ ಹಾಗೂ ಟಿ20 ಮಾದರಿ ಗಳಲ್ಲಿ ಓವರ್ ರೇಟ್ ತೀರಾ ಕಳಪೆಯಾ ಗಿರುವುದು ಕಂಡು ಬಂದಿದೆ. ಹಲವು ವರ್ಷಗಳಲ್ಲಿ ಇದು ಅತ್ಯಂತ ಕಡಿಮೆ ಯಾಗಿದ್ದು, ಶೀಘ್ರ ಸೂಕ್ತ ಪರಿಹಾರ ಕಂಡುಹಿಡಿಯುವ ಒತ್ತಡಕ್ಕೆ ಎಂಸಿಸಿ ಸಮಿತಿ ಸಿಲುಕಿದೆ. 

ಈಗಾಗಲೇ ಬಾಸ್ಕೆಟ್‌ಬಾಲ್, ಕಬಡ್ಡಿ ಹೀಗೆ ಹಲವು ಕ್ರೀಡೆ ಗಳಲ್ಲಿ ಸಮಯದ ಮಿತಿ ಅಳವಡಿಸಲಾಗಿದೆ. ಅದೇ ರೀತಿ ಬೌಲರ್‌ಗಳು, ಫೀಲ್ಡಿಂಗ್ ಮಾಡುವ ತಂಡ ಸಮಯ ವ್ಯರ್ಥ ಮಾಡುವುದನ್ನು ತಡೆಯಲು ಸಮಯ ಮಿತಿ ಜಾರಿ ಮಾಡಬೇಕು ಎಂದು ಚರ್ಚಿಸಲಾಯಿತು. ನಿರ್ದಿಷ್ಟ ಸಮಯದೊಳಗೆ ಓವರ್ ಮುಕ್ತಾಯಗೊಳಿಸಬೇಕು. ಇಲ್ಲವಾದಲಿ ರನ್‌ಗಳ ರೂಪದಲ್ಲಿ ದಂಡ ವಿಧಿಸುವ ಬಗ್ಗೆಯೂ ಚರ್ಚೆ ನಡೆಯಿತು ಎನ್ನಲಾಗಿದೆ. 

loader