ಹೊಸ ತ್ರಿಕೋನ ಪ್ರೇಮ: ಆಕೆ, ಅವನು ಮತ್ತು ಇಂಟರ್ನೆಟ್‌..!

sports | Wednesday, February 7th, 2018
Suvarna Web Desk
Highlights

ಭದ್ರತಾ ಪರಿಹಾರ ಪೂರೈಕೆದಾರ ಮ್ಯಾಕಫೀ ನಡೆಸಿದ ಸಮೀಕ್ಷೆಯನುಸಾರ, ನಾಲ್ವರಲ್ಲಿ ಮೂವರು ತಮ್ಮ ಉಪಕರಣಗಳ ಜೊತೆಗೆ ಸಂಗಾತಿಯತ್ತ ಗಮನ ನೀಡಲು ಹರಸಾಹಸಪಡುತ್ತಾರೆ. ತಂತ್ರಜ್ಞಾನದ ಬಳಕೆಯಿಂದ ಸಂಬಂಧಗಳು ದೂರವಾಗುತ್ತಿವೆ ಎಂದು ಶೇ.77 ಮಂದಿ ಒಪ್ಪಿದ್ದಾರೆ. ಜೊತೆಗಿರುವಾಗ ಜೊತೆಗಿರುವವರಿಗಿಂತ ಹೆಚ್ಚಾಗಿ ಫೋನ್‌'ನಲ್ಲೇ ಮುಳುಗಿರುವ ಬಗ್ಗೆ ಬಂಧುಗಳು, ಸಂಗಾತಿ, ಸ್ನೇಹಿತರ ಜೊತೆ ವಾಗ್ವಾದ ನಡೆಸಿದ್ದ ಬಗ್ಗೆ ಶೇ.81 ಮಂದಿ ತಿಳಿಸಿದ್ದಾರೆ.

ನವದೆಹಲಿ(ಫೆ.07): ಇಂಟರ್ನೆಟ್‌, ಜಗತ್ತಿನ ಯಾವುದೋ ಮೂಲೆಯಲ್ಲಿರುವ ಹೃದಯಗಳನ್ನು ಹತ್ತಿರ ತರಬಹುದು. ಆದರೆ, ಅದಕ್ಕಿಂತ ಹೆಚ್ಚಾಗಿ ಭಾರತದಲ್ಲಿ ನಡೆಸಲಾದ ಸಮೀಕ್ಷೆಯೊಂದರ ಪ್ರಕಾರ, ಭಾರತದ ಇಂಟರ್ನೆಟ್‌ ಬಳಕೆದಾರರಲ್ಲಿ, ಮೂವರಲ್ಲಿ ಇಬ್ಬರಿಗೆ ತಮ್ಮ ಸಂಗಾತಿ ಅಥವಾ ಸಂಬಂಧಿಗಳ ಮೇಲಿನ ಆಸಕ್ತಿಗಿಂತ ಹೆಚ್ಚು ಆಸಕ್ತಿ, ತಾವು ಬಳಕೆ ಮಾಡುವ ಇಂಟರ್ನೆಟ್‌ ಸಂಪರ್ಕಿತ ಫೋನ್‌ ಅಥವಾ ಉಪಕರಣದ ಮೇಲಿದೆ ಎನ್ನಲಾಗಿದೆ.

ಭದ್ರತಾ ಪರಿಹಾರ ಪೂರೈಕೆದಾರ ಮ್ಯಾಕಫೀ ನಡೆಸಿದ ಸಮೀಕ್ಷೆಯನುಸಾರ, ನಾಲ್ವರಲ್ಲಿ ಮೂವರು ತಮ್ಮ ಉಪಕರಣಗಳ ಜೊತೆಗೆ ಸಂಗಾತಿಯತ್ತ ಗಮನ ನೀಡಲು ಹರಸಾಹಸಪಡುತ್ತಾರೆ. ತಂತ್ರಜ್ಞಾನದ ಬಳಕೆಯಿಂದ ಸಂಬಂಧಗಳು ದೂರವಾಗುತ್ತಿವೆ ಎಂದು ಶೇ.77 ಮಂದಿ ಒಪ್ಪಿದ್ದಾರೆ. ಜೊತೆಗಿರುವಾಗ ಜೊತೆಗಿರುವವರಿಗಿಂತ ಹೆಚ್ಚಾಗಿ ಫೋನ್‌'ನಲ್ಲೇ ಮುಳುಗಿರುವ ಬಗ್ಗೆ ಬಂಧುಗಳು, ಸಂಗಾತಿ, ಸ್ನೇಹಿತರ ಜೊತೆ ವಾಗ್ವಾದ ನಡೆಸಿದ್ದ ಬಗ್ಗೆ ಶೇ.81 ಮಂದಿ ತಿಳಿಸಿದ್ದಾರೆ.

ಸಂಗಾತಿ ಜೊತೆಗಿರುವಾಗ ಮೊಬೈಲ್‌ ಫೋನ್‌ ಬಳಕೆಗೆ ಕಡ್ಡಾಯ ನಿಯಂತ್ರಣ ಹೇರುವುದಕ್ಕೆ ಶೇ.20 ಮಂದಿಗೆ ಮಾತ್ರ ಸಾಧ್ಯವಾಗಿದೆ. ಕುತೂಹಲಕಾರಿ ವಿಷಯವೆಂದರೆ, ಶೇ.45 ಮಂದಿ ತಮ್ಮ ಸಂಗಾತಿಯ ಸಾಮಾಜಿಕ ಜಾಲತಾಣ ಅಥವಾ ಇಂಟರ್ನೆಟ್‌ ಬಳಕೆಯ ಉಪಕರಣದ ಮೇಲೆ ಗೂಢಾಚಾರಿಕೆ ಮಾಡಿದ್ದಾರೆ ಎಂಬುದೂ ಸಮೀಕ್ಷೆಯಿಂದ ತಿಳಿದು ಬಂದಿದೆ. ಬೆಂಗಳೂರು, ದೆಹಲಿ, ಮುಂಬೈಯಲ್ಲಿ ಈ ಸಮೀಕ್ಷೆ ನಡೆದಿದೆ.

Comments 0
Add Comment

  Related Posts

  Sandalwood Love Gossip News

  video | Wednesday, March 14th, 2018

  Remarks made by internet trolls affect my family

  video | Wednesday, February 21st, 2018

  Rachita Ram Love Matter

  video | Thursday, February 15th, 2018

  Priya Prakash Song Kannada Meaning

  video | Thursday, February 15th, 2018

  Sandalwood Love Gossip News

  video | Wednesday, March 14th, 2018
  Suvarna Web Desk