ಮೈಕ್ ಡ್ರಾಪ್ ಸಂಭ್ರಮ: ವಿರಾಟ್ ಕೊಹ್ಲಿಗೆ ಎಚ್ಚರಿಕೆ ನೀಡಿದ ರೆಫ್ರಿ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 3, Aug 2018, 4:34 PM IST
Match referee summons Virat Kohli for mike drop celebration
Highlights

ಜೋ ರೂಟ್ ರನೌಟ್ ಮಾಡಿ ಏಟಿಗೆ ಎದಿರೇಟು ನೀಡಿದ್ದ ನಾಯಕ ವಿರಾಟ್ ಕೊಹ್ಲಿಗೆ ಅಂಪೈರ್ ವಾರ್ನಿಂಗ್ ನೀಡಿದ್ದಾರೆ.  ಕೊಹ್ಲಿ ಮೈಕ್ ಡ್ರಾಪ್ ಸಂಭ್ರಮಕ್ಕೆ ಮ್ಯಾಚ್ ರೆಫ್ರಿ ಹೇಳಿದ್ದೇನು? ಇಲ್ಲಿದೆ .

ಎಡ್ಜ್‌ಬಾಸ್ಟನ್(ಆ.03): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮೂಲಕ ಮಾತ್ರವಲ್ಲ, ತಮ್ಮ ಅಗ್ರೆಸ್ಸೀವ್ ನಾಯಕತ್ವದಿಂದಲೂ ಹೆಚ್ಚು ಜನಪ್ರೀಯವಾಗಿದ್ದಾರೆ. ಕೊಹ್ಲಿಗೆ ಸ್ಲೆಡ್ಜಿಂಗ್ ಮಾಡಿದರೆ ಅಲ್ಲೇ ಡ್ರಾ ಅಲ್ಲೇ ಬಹುಮಾನ. ಏಟಿಗೆ ಎದಿರೇಟು ಕೊಡೋ ಜಾಯಮಾನ ಕೊಹ್ಲಿಯದ್ದು.

ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಜೋ ರೂಟ್ ರನೌಟ್ ಮಾಡಿದ ವಿರಾಟ್ ಕೊಹ್ಲಿ, ತಕ್ಕ ತಿರುಗೇಟು ನೀಡಿದರು. ಭಾರತ ವಿರುದ್ಧದ ಏಕದಿನ ಪಂದ್ಯದಲ್ಲಿ ಜೋ ರೂಟ್ ಬ್ಯಾಟ್ ಡ್ರಾಪ್ ಮಾಡಿ ಸಂಭ್ರಮಿಸಿದ್ದರು. ಇದಕ್ಕೆ ಪ್ರತಿಯಾಗಿ ಕೊಹ್ಲಿ ರನೌಟ್ ಮಾಡೋ ಮೂಲಕ ಮೈಕ್ ಡ್ರಾಪ್ ಸೆಲೆಬ್ರೇಷನ್ ಮಾಡಿ ಸಂಭ್ರಮಿಸಿದ್ದರು.

ಮೈಕ್ ಡ್ರಾಪ್ ಸಂಭ್ರಮದ ಜೊತೆಗೆ ರೂಟ್ ಅವರನ್ನ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು  ಮ್ಯಾಚ್ ರೆಫ್ರಿ ಜೆಫ್ ಕ್ರೊವ್ ಕೊಹ್ಲಿಗೆ ಎಚ್ಚರಿಗೆ ನೀಡಿದ್ದಾರೆ. 3ನೇ ದಿನದಾಟ ಆರಂಭಕ್ಕೂ ಮುನ್ನ ವಿರಾಟ್ ಕೊಹ್ಲಿ ಜೊತೆ ಮಾತನಾಡಿದ ಜೆಫ್ ಕ್ರೊವ್, ಭಾವನೆಗಳನ್ನ ಹಿಡಿತದಲ್ಲಿಡಲು ಸೂಚಿಸಿದ್ದಾರೆ ಎಂದು ಸ್ಕೈ ಸ್ಪೋರ್ಟ್ ವರದಿ ಮಾಡಿದೆ. 

 ಇದನ್ನು ಓದಿ: ಏಟಿಗೆ ಎದಿರೇಟು: ಜೋ ರೂಟ್‌ ಬ್ಯಾಟ್ ಡ್ರಾಪ್‌ಗೆ ಕೊಹ್ಲಿ ಮೈಕ್ ಡ್ರಾಪ್!

ವಿರಾಟ್ ಕೊಹ್ಲಿ ಮೈಕ್ ಡ್ರಾಪ್ ಸಂಭ್ರಮ ಆಚರಿಸೋ ಮೂಲಕ ಮಾಜಿ ನಾಯಕ ಸೌರವ್ ಗಂಗೂಲಿ ಶರ್ಟ್ ತಿರುಗೇಟನ್ನ ನೆನಪಿಸಿದ್ದರು. ಇಂಗ್ಲೆಂಡ್ ವೇಗಿ ಆಂಡ್ರ್ಯೂ ಫ್ಲಿಂಟಾಫ್ ಶರ್ಟ್ ಬಿಚ್ಚಿ ಸಂಭ್ರಮಾಚರಿಸಿದ್ದಕ್ಕೆ, ನಾಯಕ ಸೌರವ್ ಗಂಗೂಲಿ 2002ರ ನಾಟ್ ವೆಸ್ಟ್ ಸರಣಿ ಗೆಲುವಿನ ಸಂದರ್ಭದಲ್ಲಿ ಶರ್ಟ್ ಬಿಚ್ಚಿ ಸೆಲೆಬ್ರೇಷ್ ಮಾಡೋ ಮೂಲಕ ತಿರುಗೇಟು ನೀಡಿದ್ದರು. 
 

loader