ಏಟಿಗೆ ಎದಿರೇಟು: ಜೋ ರೂಟ್‌ ಬ್ಯಾಟ್ ಡ್ರಾಪ್‌ಗೆ ಕೊಹ್ಲಿ ಮೈಕ್ ಡ್ರಾಪ್!

https://static.asianetnews.com/images/authors/2c1b126a-9adf-5f82-ae4f-e781463685fe.jpg
First Published 2, Aug 2018, 2:46 PM IST
Virat Kohli mocks rival Joe Root with mic-drop celebration
Highlights

ಭಾರತ-ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ನೀಡಿದ ತಿರುಗೇಟು ಇದೀಗ ಭಾರಿ ಸದ್ದು ಮಾಡುತ್ತಿದೆ. ಏಕದಿನ ಸರಣಿಯಲ್ಲಿ ಜೋ ರೂಟ್ ಸಂಭ್ರಮಾಚರಣೆಗೆ ಕೊಹ್ಲಿ ತಕ್ಕ ಪಾಠ ಕಲಿಸಿದ್ದಾರೆ. ವಿರಾಟ್ ಕೊಹ್ಲಿ, ಜೋ ರೂಟ್‌ಗೆ ನೀಡಿದ ತಿರುಗೇಟು ಇಲ್ಲಿದೆ .

ಎಡ್ಜ್‌ಬಾಸ್ಟನ್(ಆ.02): ಸೌರವ್ ಗಂಗೂಲಿ ಬಳಿಕ ಟೀಂ ಇಂಡಿಯಾದಲ್ಲಿ ಏಟಿಗೆ ಎದಿರೇಟು ನೀಡೋ ನಾಯಕ ಅಂದರೆ ಅದು ವಿರಾಟ್ ಕೊಹ್ಲಿ. ಇದೀಗ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಮೊದಲ ದಿನ ಕೊಹ್ಲಿ ಸೇಡು ತೀರಿಸಿಕೊಂಡು ಸುದ್ದಿಯಾಗಿದ್ದಾರೆ.

ಅದ್ಬುತ ಪ್ರದರ್ಶನ ಹಾಗೂ ಅಗ್ರೆಸ್ಸೀವ್ ನಾಯಕತ್ವ ಇದು ವಿರಾಟ್ ಕೊಹ್ಲಿ ಸ್ಟೈಲ್. ಏಕದಿನ ಸರಣಿಯಲ್ಲಿ ಜೋ ರೂಟ್ ಬ್ಯಾಟ್ ಡ್ರಾಪ್ ಮಾಡಿ ಶತಕ ಹಾಗೂ ಗೆಲುವನ್ನ ಸಂಭ್ರಮಿಸಿದ್ದರು. ಇದೇ ಸೇಡಿಗೆ ಕೊಹ್ಲಿ, ಟೆಸ್ಟ್ ಪಂದ್ಯದ ಮೊದಲ ದಿನ ಜೋ ರೂಟ್‌ನ್ನ ರನೌಟ್ ಮಾಡಿದ ಕೊಹ್ಲಿ ಮೈಕ್ ಡ್ರಾಪ್ ಸೆಲೆಬ್ರೇಷನ್ ಮಾಡಿ ಸೇಡು ತೀರಿಸಿಕೊಂಡರು.

ಜೋ ರೂಟ್ 80  ರನ್ ಸಿಡಿಸಿ ಶತಕದತ್ತ ಮುನ್ನಗ್ಗುತ್ತಿದ್ದ ವೇಳೆ, ವಿರಾಟ್ ಕೊಹ್ಲಿ ಡೈರೆಕ್ಟ್ ಹಿಟ್ ಮಾಡೋ ಮೂಲಕ ರನೌಟ್ ಮಾಡಿದರು. ರೂಟ್ ವಿಕೆಟ್ ಪತನವಾಗುತ್ತಿದ್ದಂತೆ, ಟೀಂ ಇಂಡಿಯಾ ಪಾಳಯದಲ್ಲಿ ಸಂಭ್ರಮ ಮನೆಮಾಡಿತು. ಅದರಲ್ಲೂ ಕೊಹ್ಲಿ ಮೈಕ್ ಡ್ರಾಪ್ ಸ್ಟೈಲ್ ಮಾಡಿ ಜೋ ರೂಟ್‌ಗೆ ತಿರುಗೇಟು ನೀಡಿದರು.

 

 

ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಸ್ಲೆಡ್ಜಿಂಗ್, ವೈರತ್ವ ಇಂದು ನಿನ್ನೆಯದಲ್ಲ. ಇಂಡೋ-ಆಂಗ್ಲೋ ಕ್ರಿಕೆಟ್ ಆರಂಭದಿಂದ ವೈರತ್ವ ಬೆಳೆದು ಬಂದಿದೆ. ಇದು 2002ರ ನಾಟ್ ವೆಸ್ಟ್ ಸರಣಿ ವೇಳೆ ಜಗಜ್ಜಾಹೀರಾಗಿತ್ತು. 

ಇಂಗ್ಲೆಂಡ್ ವೇಗಿ ಆಂಡ್ರ್ಯೂ ಫ್ಲಿಂಟಾಫ್ ಶರ್ಟ್ ಬಿಚ್ಚಿ ಸಂಭ್ರಮಾಚರಿಸಿದ್ದಕ್ಕೆ, ನಾಯಕ ಸೌರವ್ ಗಂಗೂಲಿ 2002ರ ನಾಟ್ ವೆಸ್ಟ್ ಸರಣಿ ಗೆಲುವಿನ ಸಂದರ್ಭದಲ್ಲಿ ಶರ್ಟ್ ಬಿಚ್ಚಿ ಸೆಲೆಬ್ರೇಷ್ ಮಾಡೋ ಮೂಲಕ ತಿರುಗೇಟು ನೀಡಿದ್ದರು. ಇದೀಗ ಕೊಹ್ಲಿಗೆ ಸವಾಲು ಎಸೆದರೆ ಸುಮ್ಮನೆ ಬಿಡೋ ಜಾಯಮಾನ ಕೊಹ್ಲಿಯದ್ದಲ್ಲ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ.

 

 

loader