Asianet Suvarna News Asianet Suvarna News

ಫುಟ್ಬಾಲ್ ಮೈದಾನಕ್ಕೆ ನಾಯಿ ಎಂಟ್ರಿ- ಪಂದ್ಯ ಬಿಟ್ಟು ನಾಯಿ ಜೊತೆ ಆಟ!

ಫುಟ್ಬಾಲ್ ಮೈದಾನಕ್ಕೆ ದಿಢೀರ್ ನಾಯಿ ಎಂಟ್ರಿ ಕೊಟ್ಟು ಪಂದ್ಯ ನಿಲ್ಲಿಸಿದ ಘಟನೆಗಳು ಹಲವಾರಿವೆ. ಇದೀಗ ಫುಟ್ಬಾಲ್ ಪಂದ್ಯದ ವೇಳೆ ನಾಯಿ ಎಂಟ್ರಿಯಿಂದ ಫುಟ್ಬಾಲ್ ಪಟುಗಳೆಲ್ಲಾ ನಾಯಿ ಜೊತೆ ಆಟವಾಡಿದ್ದಾರೆ. ಇಲ್ಲಿದೆ ಹೆಚ್ಚಿನ ಮಾಹಿತಿ.

Match Dog Enters the football Field in Georgia professional match
Author
Bengaluru, First Published Oct 13, 2018, 4:04 PM IST

ಜಾರ್ಜಿಯಾ(ಅ.13): ಕ್ರಿಕೆಟ್, ಫುಟ್ಬಾಲ್ ಸೇರಿದಂತೆ ಬಹುತೇಕ ಪಂದ್ಯಗಳು ನಡೆಯುತ್ತಿರುವಾಗ ನಾಯಿ ಎಂಟ್ರಿ ಕೊಡುತ್ತಿರುವುದು ಹೊಸದೇನಲ್ಲ. ನಾಯಿಯಿಂದಾಗಿ ಪಂದ್ಯ ಕೆಲ ಕಾಲ ಸ್ಥಗಿತಗೊಳಿಸಿದ ಉಹಾಹರಣೆಗಳಿವೆ. ಆದರೆ ಇದೇ ಮೊದಲ ಬಾರಿಗೆ ಎಂಟ್ರಿ ಕೊಟ್ಟ ನಾಯಿ ಫುಟ್ಬಾಲ್ ಪಟುಗಳ ಜೊತೆ ಸ್ವಚ್ಚಂದವಾಗಿ ಆಟವಾಡಿದ ಘಟನೆ ನಡೆದಿದೆ.

ಜಾರ್ಜಿಯಾದಲ್ಲಿ ನಡೆಯುತ್ತಿದ್ದ ವೃತ್ತಿಪರ ಫುಟ್ಬಾಲ್ ಪಂದ್ಯಕ್ಕೆ ಕಪ್ಪು ಲ್ಯಾಬ್ರಡಾರ್ ನಾಯಿ ಎಂಟ್ರಿ ಕೊಟ್ಟಿದೆ. ಈ ನಾಯಿ ಇಡೀ ಮೈದಾನ ಸುತ್ತಾಡಿ ಫುಟ್ಬಾಲ್ ಪಟುಗಳ ಜೊತೆ ಆಟವಾಡಲು ಮುಂದಾಗಿದೆ. 

ಗೋಲ್‌ಕೀಪರ್ ನಾಯಿಯನ್ನ ಕೆಲ ಹೊತ್ತು ಮುದ್ದಾಡಿದರು. ಅಷ್ಟರಲ್ಲೇ ಭದ್ರತಾ ಅಧಿಕಾರಿಗಳು ಧಾವಿಸಿದರು. ನಾಯಿಯನ್ನ ಸುಲಭವಾಗಿ ಹಿಡಿದರು. ಆದರೆ ಮೈದಾನದಿಂದ ಹೊರಗೆ ಕಳುಹಿಸಲು ಸಾಧ್ಯವಾಗಲಿಲ್ಲ. ಭದ್ರತಾ ಸಿಬ್ಬಂಧಿಯಿಂದ ತಪ್ಪಿಸಿಕೊಂಡ ನಾಯಿ ಫುಟ್ಬಾಲ್ ಪಟುಗಳ ಜೊತೆ ಆಟಕ್ಕೆ ನಿಂತೇ ಬಿಟ್ಟಿತು. 

ಆಟಗಾರರು ನಾಯಿ ಜೊತೆ  ಆಟವಾಡುತ್ತಾ ನಾಯಿಯನ್ನ ಹೊರಗೆ ಕಳುಹಿಸುವಲ್ಲಿ ಯಶಸ್ವಿಯಾದರು. ನಾಯಿ ಪ್ರಹಸದ ಬಳಿಕ ಪಂದ್ಯ ಮತ್ತೆ ಆರಂಭಗೊಂಡಿತು.

Follow Us:
Download App:
  • android
  • ios