ನಿದಹಾಶ್ ಟ್ರೋಫಿ: ತ್ರಿಕೋನ ಸರಣಿ ಆರಂಭಕ್ಕೂ ಮುನ್ನವೇ ಬಾಂಗ್ಲಾಗೆ ಬಿಗ್ ಶಾಕ್

First Published 3, Mar 2018, 7:52 PM IST
Massive Setback For Bangladesh Shakib Al Hasan Ruled Out
Highlights

ನಿದಹಾಶ್ ಟ್ರೋಫಿಯ ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ವಿಶ್ವ ನಂ.1 ಶ್ರೇಯಾಂಕಿತ ತಂಡ ಭಾರತ ಮುಖಾಮುಖಿಯಾಗಲಿವೆ.

ಢಾಕಾ(ಮಾ.03): ಕೈಬೆರಳಿನ ಗಾಯದಿಂದ ಬಳಲುತ್ತಿರುವ ಬಾಂಗ್ಲಾದೇಶ ತಂಡದ ನಾಯಕ ಶಕೀಬ್ ಅಲ್ ಹಸನ್ ನಿದಹಾಶ್ ಟ್ರೋಫಿಯಿಂದ ಹೊರಬಿದ್ದಿದ್ದಾರೆ.

ಶ್ರೀಲಂಕಾದಲ್ಲಿ ನಡೆಯಲಿರುವ ಭಾರತ-ಬಾಂಗ್ಲಾದೇಶ ಹಾಗೂ ಲಂಕಾ ನಡುವಿನ ತ್ರಿಕೋನ ಟಿ20 ಸರಣಿಯು ಇದೇ ತಿಂಗಳು 6ರಿಂದ ಆರಂಭವಾಗಲಿದ್ದು, ಬಾಂಗ್ಲಾದೇಶ ಶಕೀಬ್ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯಲಿದೆ. ಶಕೀಬ್ ಸ್ಥಾನಕ್ಕೆ ಯುವ ಬ್ಯಾಟ್ಸ್'ಮನ್ ಲಿಟನ್ ದಾಸ್ ತಂಡ ಕೂಡಿಕೊಂಡಿದ್ದಾರೆ.

ಇದೀಗ ಟಿ20 ಸರಣಿಯಲ್ಲಿ ಬಾಂಗ್ಲಾದೇಶ ತಂಡವನ್ನು ಉಪನಾಯಕ ಮೊಹಮ್ಮದುಲ್ಲಾ ರಿಯಾದ್ ಮುನ್ನಡೆಸಲಿದ್ದಾರೆ.

ನಿದಹಾಶ್ ಟ್ರೋಫಿಯ ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ವಿಶ್ವ ನಂ.1 ಶ್ರೇಯಾಂಕಿತ ತಂಡ ಭಾರತ ಮುಖಾಮುಖಿಯಾಗಲಿವೆ.

loader