‘‘ನನ್ನನ್ನು ಈ ಪ್ರತಿಷ್ಠಿತ ಪ್ರಶಸ್ತಿಗೆ ಪರಿಗಣಿಸಿದ್ದಕ್ಕಾಗಿ ಎಐಬಿಎ ಅಧ್ಯಕ್ಷರು ಹಾಗೂ ಅಧಿಕಾರಿಗಳಿಗೆ ನಾನು ಕೃತಜ್ಞಳಾಗಿದ್ದೇನೆ. ಕೇವಲ ನನಗಷ್ಟೇ ಅಲ್ಲದೆ, ಭಾರತದ ಯುವ ಬಾಕ್ಸರ್‌ಗಳಿಗೂ ಇದು ಪ್ರೋತ್ಸಾಹದಾಯಕವಾಗಿದೆ’’- ಮೇರಿ ಕೋಮ್
ನವದೆಹಲಿ(ನ.25): ಭಾರತದ ನಂ.1 ಮಹಿಳಾ ಬಾಕ್ಸರ್ ಮೇರಿ ಕೋಮ್ ಮುಡಿಗೆ ಮತ್ತೊಂದು ಗರಿ ಪ್ರಾಪ್ತಿಯಾಗಿದೆ.
ಅಂತಾರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಷನ್ (ಎಐಬಿಎ) ಮುಂದಿನ ತಿಂಗಳು 20ರಂದು ತನ್ನ 70ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದು, ಲಂಡನ್ ಒಲಿಂಪಿಕ್ಸ್ ಕಂಚು ಪದಕ ವಿಜೇತೆ ಹಾಗೂ ಐದು ಬಾರಿಯ ವಿಶ್ವ ಚಾಂಪಿಯನ್ ಮತ್ತೀಗ ರಾಜ್ಯಸಭೆಯ ಸದಸ್ಯೆಯೂ ಆಗಿರುವ ಮೇರಿ ಕೋಮ್ಗೆ ‘ಲೆಜೆಂಡ್ಸ್ ಅವಾರ್ಡ್’ ಪ್ರಶಸ್ತಿಯನ್ನು ನೀಡಿ ಗೌರವಿಸಲಿದೆ.
‘‘ನನ್ನನ್ನು ಈ ಪ್ರತಿಷ್ಠಿತ ಪ್ರಶಸ್ತಿಗೆ ಪರಿಗಣಿಸಿದ್ದಕ್ಕಾಗಿ ಎಐಬಿಎ ಅಧ್ಯಕ್ಷರು ಹಾಗೂ ಅಧಿಕಾರಿಗಳಿಗೆ ನಾನು ಕೃತಜ್ಞಳಾಗಿದ್ದೇನೆ. ಕೇವಲ ನನಗಷ್ಟೇ ಅಲ್ಲದೆ, ಭಾರತದ ಯುವ ಬಾಕ್ಸರ್ಗಳಿಗೂ ಇದು ಪ್ರೋತ್ಸಾಹದಾಯಕವಾಗಿದೆ’’ ಎಂದು ಮೇರಿ ಕೋಮ್ ಹೇಳಿದ್ದಾರೆ.
