ಪ್ಯಾರಿಸ್‌(ಮಾ.10): ಮಾಜಿ ವಿಶ್ವ ನಂ.1 ಹಾಗೂ 5 ಬಾರಿ ಗ್ರ್ಯಾಂಡ್‌ ಸ್ಲಾಂ ಪ್ರಶಸ್ತಿ ವಿಜೇತ ಸ್ವಿಜರ್‌ಲೆಂಡ್‌ನ ಟೆನಿಸ್‌ ತಾರೆ ಮಾರ್ಟಿನಾ ಹಿಂಗಿಸ್‌, ಶುಕ್ರವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. 

38 ವರ್ಷದ ಹಿಂಗಿಸ್‌, ತಾವು ಹಾಗೂ ತಮ್ಮ ಪತಿ ಹರಾಲ್ಡ್‌ ಲೀಮನ್‌ ಈ ಪೋಷಕರಾಗಿರುವುದಾಗಿ ಟ್ವೀಟರ್‌ನಲ್ಲಿ ಬಹಿರಂಗ ಪಡಿಸಿದ್ದಾರೆ. ಜತೆಗೆ ತಮ್ಮ ಮಗಳಿಗೆ ಲಿಯಾ ಎಂದು ಹೆಸರಿಟ್ಟಿರುವುದಾಗಿ ತಿಳಿಸಿದ್ದಾರೆ. 

ಲೀಮನ್‌, ಸ್ವಿಜರ್‌ಲೆಂಡ್‌ ಫೆಡ್‌ ಕಪ್‌ ಟೆನಿಸ್‌ ತಂಡದ ವೈದ್ಯರಾಗಿದ್ದಾರೆ. 2017ರಲ್ಲಿ ಮಾರ್ಟಿನಾ ಟೆನಿಸ್‌ನಿಂದ ನಿವೃತ್ತಿ ಪಡೆದಿದ್ದರು.