ಉದ್ದೀಪನ ಮದ್ದು ಸೇವನೆಯಿಂದ ನಿಷೇಧಕ್ಕೊಳಗಾಗಿದ್ದ ವಿಶ್ವದ ಖ್ಯಾತ ಟೆನಿಸ್ ಆಟಗಾರ್ತಿ ರಷ್ಯಾದ ಮಾರಿಯಾ ಶರಾಪೋವಾ ಅವರ ನಿಷೇಧಿತ ಅವಧಿಯನ್ನು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ 5 ತಿಂಗಳು ಕಡಿಮೆಗೊಳಿಸಿದೆ. 15 ತಿಂಗಳು ಮಾತ್ರ ನಿಷೇಧದ ಅವಧಿಯಲ್ಲಿರುತ್ತಾರೆ. ಈ ನಿಷೇಧ ಕಡಿತಗೊಳಿಸಿದ ಕಾರಣ ಏಪ್ರಿಲ್ 26, 2017 ರ ನಂತರ ಆಟವಾಡಬಹುದು ಎಂದು ಕೋರ್ಟ್ ತಿಳಿಸಿದೆ.

5 ಬಾರಿ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ಆಗಿದ್ದ ಶರಾಪೋವಾ ನಂ.1 ಪಟ್ಟವನ್ನು ಅಲಂಕರಿಸಿದ್ದರು.ಈ ವರ್ಷದ ಜನವರಿಯಲ್ಲಿ ಆಸ್ಟ್ರೇಲಿಯಾ ಓಪನ್ ಟೆನಿಸ್ ಆಡುವಾಗ ನಿಷೇಧಿತ ಮದ್ದು ಸೇವನೆಯ ಆರೋಪಕ್ಕೆ ಸಿಕ್ಕು ಬಿದ್ದು ಅಂತರ ರಾಷ್ಟ್ರೀಯ ಟೆನಿಸ್ ಫೆಡರೇಷನ್'ನಿಂದ 2 ವರ್ಷ ನಿಷೇಧಕ್ಕೊಳಗಾಗಿದ್ದರು.

ನಂತರ ಶರಾಪೋವಾ ಅವರು ಕಳೆದ ಜೂನ್'ನಲ್ಲಿಮೇಲ್ಮನವಿ ಸಲ್ಲಿಸಿದ್ದರು. ಈಕೆಯ ಮನವಿಯನ್ನು ಪರಿಗಣಿಸಿದ ಕೋರ್ಟ್ ಮಹತ್ತರ ತಪ್ಪಾಗದಿದ್ದರೂ ಈಕೆಯಿಂದ ಒಂದಷ್ಟು ತಪ್ಪಾಗಿದೆ ಎಂದು ತಿಳಿಸಿ ಶಿಕ್ಷೆಯ ಅವಧಿಯನ್ನು 5 ತಿಂಗಳು ಕಡಿತಗೊಳಿಸಿದೆ.