ಹಾಲಿ ವಿಂಬಲ್ಡನ್ ಚಾಂಪಿಯನ್ ಸ್ಪೇನ್‌'ನ ಗಾರ್ಬೈನ್ ಮುಗುರುಜಾ ಸಹ ಪಂದ್ಯಾವಳಿಯಿಂದ ನಿರ್ಗಮಿಸಿದ್ದಾರೆ.

ನ್ಯೂಯಾರ್ಕ್(ಸೆ.04): ಸುಮಾರು 15 ತಿಂಗಳು ನಿಷೇಧದ ಬಳಿಕ ಮೊದಲ ಬಾರಿಗೆ ಗ್ರ್ಯಾಂಡ್‌'ಸ್ಲಾಂನಲ್ಲಿ ಕಣಕ್ಕಿಳಿದು ಪ್ರಶಸ್ತಿ ಜಯಿಸುವ ಕನಸು ಕಾಣುತ್ತಿದ್ದ ಮರಿಯಾ ಶರಪೋವಾಗೆ ಆಘಾತವಾಗಿದೆ. ಮಹಿಳಾ ಸಿಂಗಲ್ಸ್'ನ ನಾಲ್ಕನೇ ಸುತ್ತಿನಲ್ಲಿ ರಷ್ಯಾ ಆಟಗಾರ್ತಿ, 16ನೇ ಶ್ರೇಯಾಂಕಿತೆ ಲಾತ್ವಿಯಾದ ಅನಸ್ತಾನಿಯ ಸೆವಸ್ಟೊವಾ ವಿರುದ್ಧ 7-5, 4-6, 2-6 ಸೆಟ್‌'ಗಳಲ್ಲಿ ಸೋಲುಂಡರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

2006ರ ಯುಎಸ್ ಓಪನ್ ಚಾಂಪಿಯನ್ ಶರಪೋವಾ, ಮೊದಲ ಸೆಟ್‌'ನಲ್ಲಿ ಗೆಲುವು ಸಾಧಿಸಿದರೂ, ಆನಂತರ ಅನಗತ್ಯ ತಪ್ಪುಗಳ ಮೂಲಕ ಮುಂದಿನ ಎರಡು ಸೆಟ್ ಬಿಟ್ಟುಕೊಟ್ಟರು. ಸೋಲಿನ ಬಳಿಕ ಮಾತನಾಡಿದ ಶರಪೋವಾ ‘ಹಿಂದಿರುಗಿ ನೋಡಿದಾಗ ಈ ಪಂದ್ಯಾವಳಿಯಲ್ಲಿ ನನ್ನ ಪ್ರದರ್ಶನ ಖುಷಿ ನೀಡಿದೆ. ಈ ಪಂದ್ಯಾವಳಿ ಸಾಕಷ್ಟು ಅನುಭವ ನೀಡಿದೆ’ ಎಂದಿದ್ದಾರೆ.

ಮುಗುರುಜಾ ನಿರ್ಗಮನ:

ಹಾಲಿ ವಿಂಬಲ್ಡನ್ ಚಾಂಪಿಯನ್ ಸ್ಪೇನ್‌'ನ ಗಾರ್ಬೈನ್ ಮುಗುರುಜಾ ಸಹ ಪಂದ್ಯಾವಳಿಯಿಂದ ನಿರ್ಗಮಿಸಿದ್ದಾರೆ.

ಪ್ರೀ ಕ್ವಾರ್ಟರ್‌'ನಲ್ಲಿ 3ನೇ ಶ್ರೇಯಾಂಕಿತೆ ಮುಗುರುಜಾ, 13ನೇ ಶ್ರೇಯಾಂಕಿತೆ ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೊವಾ ವಿರುದ್ಧ ಸೋಲುಂಡರು. ಕ್ವಿಟೊವಾ 7-6(7/3), 6-3 ಸೆಟ್‌'ಗಳಲ್ಲಿ ಸುಲಭ ಜಯ ದಾಖಲಿಸಿದರು.