ಮೋನಿಕಾಗೆ ಬೆಂಬಲ ನೀಡಲು ಒಪ್ಪಿದ ಶರಪೋವಾ, ತಮ್ಮ ಸಿಹಿ ಬ್ರ್ಯಾಂಡ್ ‘ಶುಗರ್‌'ಪೊವಾ’ ವ್ಯಾಪರದಿಂದ ಬರುವ ಲಾಭವನ್ನು ಸಂಪೂರ್ಣವಾಗಿ ಸಂತ್ರಸ್ತರಿಗೆ ನೀಡುವುದಾಗಿ ಘೋಷಿಸಿದ್ದಾರೆ.

ಲಂಡನ್(ಅ.21): ಕಳೆದ ತಿಂಗಳು ಮರಿಯಾ ಚಂಡಮಾರುತಕ್ಕೆ ತುತ್ತಾದ ಕೆರಿಬಿಯನ್‌'ನ ಪೋರ್ಟೋರಿಕೊ ಸಂತ್ರಸ್ತರ ನೆರವಿಗೆ ಟೆನಿಸ್ ತಾರೆ ಮರಿಯಾ ಶರಪೋವಾ ಧಾವಿಸಿದ್ದಾರೆ.

ಆನ್‌'ಲೈನ್ ಮೂಲಕ ದೇಣಿಗೆ ಸಂಗ್ರಹಿಸಿರುವ ಪೋರ್ಟೊರಿಕೊದ ಟೆನಿಸ್ ಆಟಗಾರ್ತಿ, ಒಲಿಂಪಿಕ್ ಚಿನ್ನದ ಪದಕ ವಿಜೇತೆ ಮೊನಿಕಾ ಪುಯಿಗ್ ಜತೆ ಶರಪೋವಾ ಕೈ ಜೋಡಿಸಿದ್ದಾರೆ. ಈ ವರೆಗೂ 1,30,000 ಅಮೆರಿಕನ್ ಡಾಲರ್ (₹84.48 ಲಕ್ಷ) ಹಣ ಸಂಗ್ರಹಿಸಿರುವ ಮೋನಿಕಾ ಶರಪೋವಾ ಸಹಾಯವನ್ನು ಕೇಳಿದರು.

ಮೋನಿಕಾಗೆ ಬೆಂಬಲ ನೀಡಲು ಒಪ್ಪಿದ ಶರಪೋವಾ, ತಮ್ಮ ಸಿಹಿ ಬ್ರ್ಯಾಂಡ್ ‘ಶುಗರ್‌'ಪೊವಾ’ ವ್ಯಾಪರದಿಂದ ಬರುವ ಲಾಭವನ್ನು ಸಂಪೂರ್ಣವಾಗಿ ಸಂತ್ರಸ್ತರಿಗೆ ನೀಡುವುದಾಗಿ ಘೋಷಿಸಿದ್ದಾರೆ.

ಮುಂದಿನ ವಾರ ಭೇಟಿ: 10 ಲಕ್ಷ ಸಂತ್ರಸ್ತರಿಗೆ ಮೂಲಭೂತ ವಸ್ತುಗಳನ್ನು ವಿತರಿಸಲು ಮುಂದಿನ ವಾರ ಪೋರ್ಟೋರಿಕೊಗೆ ಶರಪೋವಾ ಭೇಟಿ ನೀಡಲಿದ್ದಾರೆ. ಇಲ್ಲಿನ ಜನ ಕುಡಿಯುವ ನೀರಿಗೂ ಸಮಸ್ಯೆ ಎದುರಿಸುತ್ತಿದ್ದು, ಆಹಾರಕ್ಕೂ ತೊಂದರೆಯಾಗಿದೆ. ಹಲವು ಟೆನಿಸ್ ಆಟಗಾರರು ಸಂತ್ರಸ್ತರ ನೆರವಿಗೆ ಬರುತ್ತಿದ್ದು, ಈಗಾಗಲೇ ಆಸ್ಟ್ರೇಲಿಯಾದ ನಿಕ್ ಕಿರಿಯೋಸ್ ಪ್ರತಿ ಬಾರಿ ಪಂದ್ಯದಲ್ಲಿ ’ಏಸ್’ ಹೊಡೆದಾಗಲೂ 50 ಡಾಲರ್ ದಾನ

ಮಾಡುತ್ತಿದ್ದಾರೆ.