ಶರಪೋವಾ 2016ರಲ್ಲಿನ ಆಸ್ಟ್ರೇಲಿಯನ್ ಓಪನ್ ವೇಳೆ ಮೆಲ್ದೋನಿಯಂ ಎಂಬ ನಿಷೇಧಿತ ಉದ್ದೀಪನ ಮದ್ದು ಸೇವಿಸಿದ್ದರು.

ಲಂಡನ್(ಫೆ.10): ರಷ್ಯಾದ ಸ್ಟಾರ್ ಆಟಗಾರ್ತಿ ಮರಿಯಾ ಶರಪೋವಾ ಅವರಿಗೆ ಮೇ ತಿಂಗಳಲ್ಲಿ ನಡೆಯಲಿರುವ ಮ್ಯಾಡ್ರಿಡ್ ಓಪನ್ ಟೆನಿಸ್ ಟೂರ್ನಿಯಲ್ಲಿ ವೈಲ್ಡ್ ಕಾರ್ಡ್ ಮೂಲಕ ಪ್ರವೇಶ ಪಡೆದಿದ್ದಾರೆ. ಇನ್ನೆರಡು ವಾರಗಳ ಬಳಿಕ ಶರಪೋವಾ ಅವರ 15 ತಿಂಗಳುಗಳ ಉದ್ದೀಪನಾ ಮದ್ದು ಸೇವನೆ ಪ್ರಕರಣದಲ್ಲಿನ ನಿಷೇಧದ ಶಿಕ್ಷೆ ಪೂರ್ಣಗೊಳ್ಳಲಿದೆ. ಹೀಗಾಗಿ 5 ಬಾರಿ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ವಿಜೇತೆ ಶರಪೋವಾಗೆ ವೈಲ್ಡ್ ಕಾರ್ಡ್ ಮೂಲಕ ಪಂದ್ಯಾವಳಿ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಇದಕ್ಕೂ ಮುನ್ನ ಶರಪೋವಾ ರಷ್ಯಾ ಏಪ್ರಿಲ್‌ನಲ್ಲಿ ನಡೆಸುವ ಸ್ಟುಟ್‌ಗಾರ್ಟ್ ಟೆನಿಸ್ ಟೂರ್ನಿಯಲ್ಲಿ ಆಡುವ ಮೂಲಕ ವೃತ್ತಿಪರ ಆಟಕ್ಕೆ ಮರಳಲಿದ್ದಾರೆ.

ಶರಪೋವಾ 2016ರಲ್ಲಿನ ಆಸ್ಟ್ರೇಲಿಯನ್ ಓಪನ್ ವೇಳೆ ಮೆಲ್ದೋನಿಯಂ ಎಂಬ ನಿಷೇಧಿತ ಉದ್ದೀಪನ ಮದ್ದು ಸೇವಿಸಿದ್ದರು. ಹಾಗಾಗಿ ಅವರ ಮೇಲೆ 15 ತಿಂಗಳುಗಳ ಕಾಲ ನಿಷೇಧ ಹೇರಲಾಗಿತ್ತು.