ಕೌಲಾಲಂಪುರ(ಸೆ.23): ಗೋಲ್ಡ್‌ಕೋಸ್ಟ್ ಕಾಮನ್‌ವೆಲ್ತ್ ಗೇಮ್ಸ್ ಚಿನ್ನ ವಿಜೇತ ಮತ್ತು ಮಲೇಷ್ಯಾದ ದಿಗ್ಗಜ ಶಟ್ಲರ್ ಲೀ ಚಾಂಗ್ ವೀ ಮೂಗಿನ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂದು ಮಲೇಷ್ಯಾ ಬ್ಯಾಡ್ಮಿಂಟನ್ ಸಂಸ್ಥೆ(ಬಿಎಎಂ) ಶನಿವಾರ ತಿಳಿಸಿದೆ. 

‘ಮೂಗಿನ ಕ್ಯಾನ್ಸರ್‌ಗೆ ತುತ್ತಾಗಿರುವ ಲೀ ಚಾಂಗ್ ವೀ ಅವರನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದ್ದು, ಇನ್ನೂ ಆರಂಭಿಕ ಹಂತದಲ್ಲಿದೆ. ಚಾಂಗ್ ವೀ ಸದ್ಯ ತೈವಾನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಸಂಸ್ಥೆ ಚಾಂಗ್ ವೀ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅಗತ್ಯವಿರುವ ಎಲ್ಲ ಸಹಾಯವನ್ನು ಮಾಡುತ್ತೇವೆ’ ಎಂದು ಸಂಸ್ಥೆ ಹೇಳಿದೆ. 

ಚಾಂಗ್ ವೀ, 2016ರ ರಿಯೋ ಒಲಿಂಪಿಕ್ಸ್'ನಲ್ಲಿ ಬೆಳ್ಳಿ ಜಯಿಸಿದ್ದಾರೆ.