ಯಶಸ್ಸಿನ ಗುಟ್ಟು ಬಿಚ್ಚಿಟ್ಟ ಕುಲ್ದೀಪ್; ಧೋನಿ, ವಿರಾಟ್ ಬಗ್ಗೆ ಹೇಳಿದ್ದೇನು..?

First Published 2, Feb 2018, 4:35 PM IST
Mahi bhai eased 50 Percent of my work Kuldeep Yadav hails MS Dhoni advice from behind the stumps
Highlights

ಯಾದವ್ 10 ಓವರ್'ಗಳಲ್ಲಿ 34 ರನ್ ನೀಡಿ ಡುಮಿನಿ, ಮಿಲ್ಲರ್ ಹಾಗೂ ಮೋರಿಸ್ ಅವರಂತಹ ಪ್ರಮುಖ ಬ್ಯಾಟ್ಸ್'ಮನ್'ಗಳನ್ನು ಪೆವಿಲಿಯನ್'ಗೆ ಕಳಿಸಿದ್ದರು

ಡರ್ಬನ್(ಫೆ.02): ದಕ್ಷಿಣ ಆಫ್ರಿಕಾ ನೆಲದಲ್ಲಿ ಮೊದಲ ಪಂದ್ಯದಲ್ಲಿಯೇ ಗಮನ ಸೆಳೆದಿರುವ ಚೈನಾಮ್ಯಾನ್ ಸ್ಪಿನ್ನರ್ ಕುಲ್ದೀಪ್ ಯಾದವ್ ತಮ್ಮ ಯಶಸ್ಸಿನ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.

ವಿಕೆಟ್ ಹಿಂದೆ ನಿಂತು ಉಪಯುಕ್ತ ಸಲಹೆಯನ್ನು ನೀಡುವ ಮೂಲಕ ಧೋನಿ ನನ್ನ 50% ಕೆಲಸವನ್ನು ಸುಲಭಗೊಳಿಸಿದ್ದಾರೆ ಎಂದು ಕುಲ್ದೀಪ್ ಹೇಳಿದ್ದಾರೆ. ಬ್ಯಾಟ್ಸ್'ಮನ್'ಗಳಿಗೆ ಯಾವ ಸಂದರ್ಭದಲ್ಲಿ ಹೇಗೆ ಬೌಲಿಂಗ್ ಮಾಡಬೇಕು ಸಾಕಷ್ಟು ಸಲಹೆ ನೀಡುತ್ತಾರೆ. ಯುವಕರಾದ ನಮಗೆ ಅಷ್ಟೇನು ಅನುಭವವಿಲ್ಲ. ಆದರೆ ವಿಕೆಟ್ ಹಿಂದೆ ಸಾಕಷ್ಟು ಅನುಭವವಿರುವ ಧೋನಿ ಸಲಹೆ ನಮ್ಮ ಕೆಲಸ ಸಾಕಷ್ಟು ಸುಲಭಗೊಳಿಸಿದೆ ಎಂದು ಹೇಳಿದ್ದಾರೆ.  ಚಾಹಲ್ ಹಾಗೂ ಕುಲ್ದೀಪ್ ಜೋಡಿ 5 ವಿಕೆಟ್ ಕಬಳಿಸುವ ಮೂಲಕ ದಕ್ಷಿಣ ಆಫ್ರಿಕಾವನ್ನು 269 ರನ್'ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾದರು.

ನನ್ನ ಮೇಲೆ ನಾಯಕ ಕೊಹ್ಲಿ ಸಂಪೂರ್ಣ ಭರವಸೆಯಿಟ್ಟಿದ್ದಾರೆ. ಹೀಗಾಗಿ ನನಗೆ ಬೌಲಿಂಗ್'ನಲ್ಲಿ ಪ್ರಯೋಗ ಮಾಡಲು ಹಿಂಜರಿಕೆಯಾಗುತ್ತಿಲ್ಲ ಎಂದು ಹೇಳಿದ್ದಾರೆ.

ಯಾದವ್ 10 ಓವರ್'ಗಳಲ್ಲಿ 34 ರನ್ ನೀಡಿ ಡುಮಿನಿ, ಮಿಲ್ಲರ್ ಹಾಗೂ ಮೋರಿಸ್ ಅವರಂತಹ ಪ್ರಮುಖ ಬ್ಯಾಟ್ಸ್'ಮನ್'ಗಳನ್ನು ಪೆವಿಲಿಯನ್'ಗೆ ಕಳಿಸಿದ್ದರು.

loader