Asianet Suvarna News Asianet Suvarna News

13 ವರ್ಷಗಳ ಬಳಿಕ ಧೋನಿ ರೈಲಿನಲ್ಲಿ ಪ್ರಯಾಣ

ಸೆಪ್ಟೆಂಬರ್ 2001ರಿಂದ ಜುಲೈ 2004 ಆರಂಭದ ದಿನಗಳಲ್ಲಿ ಖರಗ್'ಪುರದಲ್ಲಿ ಧೋನಿ ರೈಲ್ವೇ ಟಿಕೆಟ್ ಇನ್ಸ್‌ಪೆಕ್ಟರ್ ಆಗಿ ಕಾರ್ಯನಿರ್ವಹಿಸಿದ್ದರು.

Mahendra Singh Dhoni travels by train for the first time in 13 years

ಕೋಲ್ಕತಾ(ಫೆ.22): ದಕ್ಷಿಣ ಪೂರ್ವ ಭಾಗದ ರೈಲ್ವೇ ಸಂಚಾರದಲ್ಲಿ ವಿಶೇಷ ವ್ಯಕ್ತಿಯೊಬ್ಬರು ಕಾಣಿಸಿಕೊಂಡಿದ್ದರು. ರಾಂಚಿಯಿಂದ ಹೌರಾಗೆ ಪ್ರಯಾಣಿಸಿದ ಆ ವ್ಯಕ್ತಿಯನ್ನು ನೋಡಲು ಉಳಿದ ಪ್ರಯಾಣಿಕರೆಲ್ಲಾ ಮುಗಿಬಿದ್ದಿದ್ದರು.

ಅಂದಹಾಗೆ ಆ ಪ್ರಯಾಣಿಕ ಮತ್ತಾರೂ ಅಲ್ಲ, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ.

ಕೋಲ್ಕತಾದಲ್ಲಿ ನಡೆಯಲಿರುವ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಗಾಗಿ ಜಾರ್ಖಂಡ್ ತಂಡದ ಸಾರಥ್ಯ ಹೊತ್ತಿರುವ ಧೋನಿ ತಮ್ಮ ತಂಡದೊಟ್ಟಿಗೆ ಸೆಕೆಂಡ್ ಟೈರ್-ಎಸಿ 18616 ಕ್ರಿಯಾ ಯೋಗಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸಿದರು. ಭಾರತ ತಂಡದ ಸ್ಟಾರ್ ಆಟಗಾರನಾದರೂ ಯಾವುದೇ ವಿಶೇಷ ಸೌಲಭ್ಯಗಳನ್ನು ಪಡೆಯದೇ ಸಾಮಾನ್ಯ ರೈಲಿನಲ್ಲಿ ಪ್ರಯಾಣಿಸಿದ್ದು ಗಮನೀಯವಾಗಿತ್ತು.

ಅಂದಹಾಗೆ ಸೆಪ್ಟೆಂಬರ್ 2001ರಿಂದ ಜುಲೈ 2004 ಆರಂಭದ ದಿನಗಳಲ್ಲಿ ಖರಗ್'ಪುರದಲ್ಲಿ ಧೋನಿ ರೈಲ್ವೇ ಟಿಕೆಟ್ ಇನ್ಸ್‌ಪೆಕ್ಟರ್ ಆಗಿ ಕಾರ್ಯನಿರ್ವಹಿಸಿದ್ದರು.

ಫೆಬ್ರವರಿ 25ರಂದು ಈಡನ್'ಗಾರ್ಡನ್'ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಧೋನಿ ನೇತೃತ್ವದ ಜಾರ್ಖಂಡ್ ತಂಡ ಕರ್ನಾಟಕ ತಂಡವನ್ನು ಎದುರಿಸಲಿದೆ.

Follow Us:
Download App:
  • android
  • ios