ಮಾಹಿ ಪಡೆ ಇದೀಗ ಟೂರ್ನಿಯಲ್ಲಿ ಉಳಿಯಬೇಕಾದರೆ ಇದೇ 6ರಂದು ನಡೆಯಲಿರುವ ಜಮ್ಮು ಮತ್ತು ಕಾಶ್ಮೀರ ತಂಡದ ವಿರುದ್ಧ ಬೃಹತ್ ಗೆಲುವು ಸಾಧಿಸಲೇಬೇಕಿದೆ.

ಕೋಲ್ಕತಾ(ಮಾ.03): ಎಂ.ಎಸ್. ಧೋನಿ ಸಾರಥ್ಯದ ಜಾರ್ಖಂಡ್ ತಂಡ ವಿಜಯ್ ಹಜಾರೆ ಟೂರ್ನಿಯಿಂದ ಹೊರಬೀಳುವ ಭೀತಿಯಲ್ಲಿದೆ.

ಇಂದು ನಡೆದ ತನ್ನ ನಾಲ್ಕನೇ ಪಂದ್ಯದಲ್ಲಿ ಸೌರಭ್ ತಿವಾರಿ (102) ದಾಖಲಿಸಿದ ಶತಕದ ಹೊರತಾಗಿಯೂ, ಹೈದರಾಬಾದ್ ವಿರುದ್ಧ 21 ರನ್‌'ಗಳ ಸೋಲನುಭವಿಸಿತು. ಇದು ಅದರ ನಾಕೌಟ್ ಹಾದಿಯನ್ನು ಮತ್ತಷ್ಟು ದುರ್ಗಮವಾಗಿಸಿದೆ.

ಗೆಲ್ಲಲು ಹೈದರಾಬಾದ್ ನೀಡಿದ್ದ 204 ರನ್‌'ಗೆ ಉತ್ತರವಾಗಿ ಧೋನಿ ಪಡೆ 44.4 ಓವರ್‌ಗಳಲ್ಲಿ 182ಕ್ಕೆ ಆಲೌಟ್ ಆಯಿತು. ನಾಯಕ ಮಾಹಿ ಕೇವಲ 28 ಬಾರಿಸಲಷ್ಟೇ ಶಕ್ತರಾದರು.

ಸೌರಭ್ ತಿವಾರಿ ಔಟ್ ಆಗುವ ಮುನ್ನ 70 ಎಸೆತಗಳಲ್ಲಿ ಕೇವಲ 31 ರನ್'ಗಳ ಅವಶ್ಯಕತೆಯಿತ್ತು. ತಿವಾರಿ ವಿಕೆಟ್ ಒಪ್ಪಿಸುತ್ತಿದ್ದಂತೆ ದಿಢೀರ್ ಕುಸಿತ ಕಂಡ ಮಾಹಿ ಪಡೆ 21 ರನ್'ಗಳ ಅಂತರದಲ್ಲಿ ಸೋಲನ್ನೊಪ್ಪಿಕೊಂಡಿತು.

ಮೂರು ಗೆಲುವು ಮತ್ತು ಎರಡು ಸೋಲಿನೊಂದಿಗೆ 12 ಅಂಕ ಕಲೆಹಾಕಿರುವ ಮಾಹಿ ಪಡೆ ಇದೀಗ ಟೂರ್ನಿಯಲ್ಲಿ ಉಳಿಯಬೇಕಾದರೆ ಇದೇ 6ರಂದು ನಡೆಯಲಿರುವ ಜಮ್ಮು ಮತ್ತು ಕಾಶ್ಮೀರ ತಂಡದ ವಿರುದ್ಧ ಬೃಹತ್ ಗೆಲುವು ಸಾಧಿಸಲೇಬೇಕಿದೆ.

16 ಅಂಕ ಕಲೆಹಾಕಿರುವ ಕರ್ನಾಟಕ ಮತ್ತು ಹೈದರಾಬಾದ್ ಜಂಟಿ ಅಗ್ರ ಸ್ಥಾನವನ್ನು ಕಾಯ್ದುಕೊಂಡಿವೆ.