ಶಿಮ್ಲಾ(ಆ.28): ಟೀಂ ಇಂಡಿಯಾ ಮಾಜಿ ನಾಯಕ ಎಂ ಎಸ್ ಧೋನಿ ಸದ್ಯ ಕುಟುಂಬದ ಜೊತೆ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿದ್ದಾರೆ. ಇಂಗ್ಲೆಂಡ್ ವಿರುದ್ಧದ ನಿಗಧಿತ ಓವರ್ ಸರಣಿ ಬಳಿಕ ಧೋನಿ ವಿಶ್ರಾಂತಿಗೆ ಜಾರಿದ್ದಾರೆ. ಇದೀಗ ಸಿಕ್ಕ ಸಮಯದಲ್ಲಿ ಧೋನಿ ಕುಟುಂಬದ ಜೊತೆ ಶಿಮ್ಲಾಗೆ ಹಾರಿದ್ದಾರೆ.

ಶಿಮ್ಲಾದ ಸುಂದರ ತಾಣದಲ್ಲಿ ಬೀಡುಬಿಟ್ಟಿರುವ ಧೋನಿ ಕುಟುಂಬ ಸಖತ್ ಎಂಜಾಯ್ ಮಾಡುತ್ತಿದೆ. ವಿಶೇಷ ಅಂದರೆ ಧೋನಿ ಹಾಗೂ ಧೋನಿ ಮಿತ್ರ , ರಿತಿ ಸ್ಪೋರ್ಟ್ಸ್ ಮುಖ್ಯಸ್ಥ ಅರುಣ್ ಪಾಂಡೆ ಬೆಳ್ಳಂಬೆಳಗ್ಗೆ ಶಿಮ್ಲಾ ಬೆಟ್ಟಗುಡ್ಡಗಳ ದಾರಿಯಲ್ಲಿ ಬೈಕ್ ರೈಡ್ ಮಾಡಿದ್ದಾರೆ.

ಬುಲೆಟ್ ಬೈಕ್ ಏರಿ ಶಿಮ್ಲಾ ಸುಂದರ ತಾಣಗಳಲ್ಲಿ ಎಂ ಎಸ್ ಧೋನಿ ಹಾಗೂ ಅರುಣ್ ಪಾಂಡೆ ಸುತ್ತಾಡಿದ್ದಾರೆ. ಆದರೆ ಯಾವುದೇ ಭದ್ರತಾ ಸಿಬ್ಬಂಧಿಗಳಿಲ್ಲದೆ ಧೋನಿ ಹಾಗೂ ಅರುಣ್ ಪಾಂಡೆ ಶಿಮ್ಲಾದಲ್ಲಿ ಸುತ್ತಾಡಿದ್ದಾರೆ.

ಬ್ರೌನ್ ಜಾಕೆಟ್, ಬ್ಲೂ ಜೀನ್ಸ್ , ಗಾಗಲ್ಸ್ ಹಾಗೂ ಹೆಲ್ಮೆಟ್ ಹಾಕಿದ ಧೋನಿ ಶಿಮ್ಲಾ ಸುತ್ತಾಡಿದ್ದಾರೆ. ಧೋನಿಗೆ ಅರುಣ್ ಪಾಂಡೆ ಕೂಡ ಸಾಥ್ ನೀಡಿದ್ದಾರೆ. ಇವರಿಬ್ಬರು ಶಿಮ್ಲಾ ದಾರಿಯಲ್ಲಿ ಸುತ್ತಾಡುತ್ತಿರುವ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ಇದನ್ನೂ ಓದಿ: ಫ್ಯಾಮಿಲಿ ಜೊತೆ ಎಂ ಎಸ್ ಧೋನಿ ಶಿಮ್ಲಾ ಟೂರ್!